ಕೋಲಾರ: ಐದು ತಿಂಗಳ ಗರ್ಭಿಣಿ ಸ್ತ್ರೀಯೊಬ್ಬರಿಗೆ ಅತಿ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ನೀಡಿ, ಗರ್ಭದಲ್ಲಿದ್ದ ಕಲ್ಲುಗಳನ್ನು ಹೊರ ತೆಗೆಯಲಾಗಿದೆ. ಶಸ್ತ್ರ ಚಿಕಿತ್ಸೆಗೆ ಗರ್ಭಿಣಿ ಸ್ಪಂಧಿಸಿದ್ದು, ಆರೋಗ್ಯದಿಂದ ಇರುವುದಾಗಿ ಕೋಲಾರ ವಂಶೋದಯ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ರೋಗಿಗೆ ಜಾಂಡೀಸ್ ಕಾಯಿಲೆ ಇದ್ದು ಪಿತ್ತಕೋಶ ಮತ್ತು ಪಿತ್ತನಾಳ ಎರಡು ಕಡೆ ಕಲ್ಲು ಇದ್ದದ್ದರಿಂದ ಕಲ್ಲುಗಳನ್ನು ತೆಗೆಯುವುದು ಬಹಳ ಅನಿವಾರ್ಯವಾಗಿತ್ತು, ಆದರೆ ರೋಗಿಯು ಐದು ತಿಂಗಳು ಗರ್ಭಿಣಿಯಾದ್ದರಿಂದ ಲ್ಯಾಪ್ರೋಸ್ಕೋಪಿ ಮಾಡಲು ಸಹ ಸಾದ್ಯವಾಗದ ಕ್ಲಿಷ್ಟಕರ ಹಾಗು ಕಷ್ಟದ ಪರಿಸ್ಥಿತಿಯಲ್ಲಿ ವಂಶೋದಯ ಆಸ್ಪತ್ರೆಯ ಗ್ಯಾಸ್ಟ್ರೋ ಸರ್ಜನ್ ಡಾ.ವಿನಯ್ ಹಾಗು ತಂಡದ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡಿ ತಾಯಿ ಹಾಗು ಗರ್ಭದಲ್ಲಿರುವ ಮಗುವಿಗೆ ಯಾವುದೇ ಹಾನಿಯಾಗದಂತೆ ಚಿಕಿತ್ಸೆ ನೀಡಿದ್ದಾರೆ.
ವಂಶೋದಯ ಆಸ್ಪತ್ರೆಯ ಪ್ರಸಿದ್ದ ಗ್ಯಾಸ್ಟ್ರೋ ಸರ್ಜನ್ ಡಾ.ವಿನಯ್ ಮಾತನಾಡಿ ನಮ್ಮ ಬಳಿ ರೋಗಿ ಬಂದಾಗ ಐದು ತಿಂಗಳ ಗರ್ಭಿಣಿಯಾಗಿದ್ದು, ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಎರಡು ಭಾಗಗಳಲ್ಲಿ ಕಲ್ಲುಗಳಿದ್ದವು ರೋಗಿಗೆ ಜಾಂಡೀಸ್ ಕಾಯಿಲೆಯ ತೀವ್ರತೆಯು ಹೆಚ್ಚಾಗಿತ್ತು. ಸಾಮಾನ್ಯವಾಗಿ ಬೇರೆ ರೋಗಿಗಳಿಗೆ ಲ್ಯಾಪ್ರೋಸ್ಕೋಪಿ ಅಥವಾ ಇಆರ್ ಸಿಪಿ ಎಂಬ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತೇವೆ ಆದರೆ ಈ ಪ್ರಕರಣದಲ್ಲಿ ರೋಗಿ ಗರ್ಭಿಣಿ ಆದ್ದರಿಂದ ಎಕ್ಸರೇ(ವಿಕಿರಣಗಳನ್ನು )ಬಳಸಿ ಇಆರ್ಸಿಪಿ ಮಾಡಲು ಸಾದ್ಯವಾಗದ ಪರಿಸ್ಥಿತಿ ನಮಗೆ ಅತಿ ದೊಡ್ಡ ಸವಾಲಾಗಿತ್ತು,
ಶಸ್ತ್ರ ಚಿಕಿತ್ಸೆ ಮಾಡದೇ ಹೋದರೆ ತಾಯಿ ಮಗುವಿಗೆ ತೊಂದರೆ ಆಗುವುದರ ಜೊತೆಗೆ ಜಾಂಡೀಸ್ ಹೆಚ್ಚಾಗುವ ಸಾದ್ಯತೆ ಇದ್ದದ್ದರಿಂದ ನಾವು ರಿಸ್ಕ್ ತೆಗೆದುಕೊಂಡು ವಿಕಿರಣಗಳನ್ನು ಬಳಸದೆ ಲ್ಯಾ ಪ್ರೋಸ್ಕೋಪಿಯ ಮುಖಾಂತರ ಶಸ್ತ್ರ ಚಿಕಿತ್ಸೆ ಮಾಡಿ ಎರಡು ಭಾಗದಲ್ಲಿದ್ದ ಕಲ್ಲನ್ನು ಹೊರತೆಗೆಯಲಾಯಿತು.
ಶಸ್ತ್ರ ಚಿಕಿತ್ಸೆ ಯ ಮೂರನೆ ದಿನ ರೋಗಿಯು ಯಾವುದೇ ರೋಗ ಲಕ್ಷಣಗಳಿಲ್ಲದೆ ಮನೆಗೆ ಕಳುಹಿಸಲಾಯಿತು. ಈ ಶಸ್ತ್ರ ಚಿಕಿತ್ಸೆಯಿಂದ ಮಗು ಮತ್ತು ತಾಯಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮಾಹಿತಿ ನೀಡಿದರು. ತಮ್ಮ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಗರ್ಭದಲ್ಲಿರುವ ಮಗುವಿನ ಆರೋಗ್ಯ ಕಾಪಾಡಿದ ಡಾ.ವಿನಯ್ ಹಾಗು ಅವರ ತಂಡಕ್ಕೆ ರೋಗಿ ಹಾಗು ಅವರ ಕುಟುಂಬದವರು ಕೃತಜ್ಞತೆಯನ್ನು ತಿಳಿಸಿದ್ದಾರೆ.