ಚಳ್ಳಕೆರೆ: ತಾಲ್ಲೂಕಿನ ಕರಿಕೆರೆ ಗ್ರಾಮದ ರೈತ ಬಾಬು ರೆಡ್ಡಿ (44) ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರು ವ ಘಟನೆ ನೆಡೆದಿದೆ.ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿರು ವ ಬಾಬುರೆಡ್ಡಿಯವರ ತಂದೆ ಹನುಮಂತರೆಡ್ಡಿಯವ ರು ಕಾಲುವೇಹಳ್ಳಿ ಗ್ರಾಮದ ರಿ.ಸರ್ವೆ ನಂ.183/2 ರಲ್ಲಿ 6 ಎಕರೆ ಜಮೀನಿನಲ್ಲಿ ನನ್ನ ಮಗ ಬಾಬುರೆಡ್ಡಿ ಶೇಂಗಾ,ಮೆಕ್ಕೆ ಜೋಳ, ಹಾಗೂ ತೊಗರಿಯನ್ನು ಬಿತ್ತನೆ ಮಾಡಿದ್ದು. ಮಳೆ ಬಾರದ ಕಾರಣ ಜಮೀನಿನಲ್ಲಿ ಇದ್ದ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆಯ ನ್ನು ಉಳಿಸಿ ಕೊಳ್ಳಲು ಸ್ನೇಹಿತರಬಳಿ ಕೈಗಡ ಸುಮಾರು 5 ಲಕ್ಷಸಾಲ ಮಾಡಿ.
ಫಸಲಿಗೆ ನೀರು ಹಾಯಿಸಿದ್ದು.ಫಸಲು ಬಾರದ ಕಾರಣ ಸಾಲ ತೀರಿ ಸಲು ಚಿಂತೆಗೀಡಾ ಗಿದ್ದ. ಬಾಬು ರೆಡ್ಡಿ ಶನಿವಾರ ರಾತ್ರಿ 7.30ರ ಸುಮಾರಿ ನಲ್ಲಿ ಮನೆಯಲ್ಲೇ ವಿಷ ಸೇವಿದನ್ನು ಪತ್ನಿ ಶ್ವೇತ ಗಮನಿ ಸಿ. ಕೂಡಲೇ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತು.ಅಲ್ಲಿಂದ ಚಿತ್ರದುರ್ಗ ಆಸ್ಪತ್ರೆಯಲ್ಲಿ ಹೆಚ್ಚಿ ನ ಚಿಕಿತ್ಸೆಕೊಡಿಸಿ.ಭಾನುವಾರ ಸಂಜೆ ದಾವಣಗೆರೆ ಆಸ್ಪ ತ್ರೆಗೆ ಕರೆದ್ಯೊಯುವ ಮಾರ್ಗ ಮದ್ಯದಲ್ಲಿ ಬಾಬುರೆಡ್ಡಿ ಸಾವನಪ್ಪಿರುತ್ತಾರೆ.
ಅತ್ತ ಮಳೆಯು ಇಲ್ಲದೆ, ಬೆಳೆಯೂ ಕೈಸೇರದ ಕಾರಣ ನನ್ನ ಮಗ ಕೃಷಿ ಗಾಗಿ ಮಾಡಿದ್ದ 5 ಲಕ್ಷ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆ ಯಲ್ಲಿ ಮಾನಸಿಕವಾ ಗಿ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾ ನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಚಳ್ಳಕೆರೆ ಪೊಲೀಸ ರು ಪ್ರಕರಣ ದಾಖಲಿಸಿ ಕೊಂಡು. ತನಿಖೆ ಮುಂದುವರೆ ಸಿದ್ದಾರೆ. ಕೃಷಿಯನ್ನೇ ನೆಚ್ಚಿ ಗೊಂಡು ಜೀವನ ಸಾಗಿಸುತ್ತಿ ರುವ ಎಷ್ಟೋ ರೈತರು ಸಾಲ ಸೋಲ ಮಾಡಿ ಕೃಷಿಯಲ್ಲಿ ತೊಡಗುತ್ತಾರೆ. ಮಳೆಯನ್ನೇ ನೆಚ್ಚಿಕೊಂಡು ಬ್ಯಾಂಕ್ಗ ಳಲ್ಲಿ ಸಾಲಮಾಡಿ ಬಿತ್ತನೆ ಮಾಡುತ್ತಾರೆ. ಆದರೆ, ಮಳೆ ಬಾರದೆ,ಇತ್ತ ಕೊಳವೆಬಾವಿಯಲ್ಲೂ ನೀರು ಬತ್ತಿ ಆತ್ಮ ಹತ್ಯೆಗೆ ಇಳಿಯುತ್ತಿದ್ದಾರೆ.