ಬೆಂಗಳೂರು : ತಂದೆ ಮತ್ತು ಮಗನ ಜಗಳದಲ್ಲಿ ತಂದೆ ಮಗನಿಗೆ ಸಿಂಗಲ್ ಬ್ಯಾರೆಲ್ ಮಜಲ್ ಲೋಡ್ ಗನ್ನಿಂದ ಹೊಡೆದ ಪರಿಣಾಮ ಹರೀಶ್(೩೦)ನ ಮುಖಕ್ಕೆ ತೀವ್ರತರವಾದ ಗಾಯ ಸಂಭವಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಕಳೆದೆರಡು ಮೂರು ದಿನಗಳಿಂದ ಪ್ರತಿದಿನ ಗಲಾಟೆ ಸಂಭವಿಸಿ ನಿನ್ನೆ ರಾತ್ರಿ ಗಲಾಟೆ ವಿಕೋಪಕ್ಕೆ ಹೋಗಿ ಸುರೇಶ್(೬೦) ಕುಡಿದು ಬಂದು ತಂದೆ ಮಗ ಹರೀಶನಿಗೆ ಸಿಂಗಲ್ ಬ್ಯಾರೆಲ್ ಲೋಡೆಡ್ ಡಬಲ್ನಿಂದ ಹೊಡೆದಿರುತ್ತಾನೆ. ಜಮೀನು ಮಾರಾಟ ಮಾರಾಟ ಮಾಡಿದ ವಿಷಯಕ್ಕೆ ತಂದೆ ಮಗನಿಗೆ ಆಗಿಂದಾಗೆ ಗಲಾಟೆ ಸಂಭವಿಸುತ್ತಿತ್ತು ಎಂದು ಪೊಲೀಸರು ತಿಳಿಸಿರುತ್ತಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿರುತ್ತಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



