ಕೋಲಾರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಗಳನ್ನು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್ ಅಭಿಪ್ರಾಯಪಟ್ಟರ ಕೋಲಾರ ನಗರದ ಖಾದ್ರಿಪುರದ ಶಿವಕುಮಾರ್ ಮತ್ತು ಮಂಜುಳ ಅವರ ಮಗಳಾದ ಹರಿಪ್ರಿಯ ಅವರನ್ನು ಸನ್ಮಾನಿಸಿಮಾತಾನಾಡಿದರು.
ಹರಿಪ್ರಿಯ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡ 97 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿ ಮತ್ತು ನೈತಿಕ ಮೌಲ್ಯ ಇರಬೇಕು. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ನಾರಾಯಣಪ್ಪ ಮಾತಾನಾಡಿ ಶಿಕ್ಷಣದ ಜೊತೆಗೆ ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು.
ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಯ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ತಂದೆ ತಾಯಿಗಳನ್ನು ಶುಭಹಾರೈಸಿದರು.ಉಪನ್ಯಾಸಕ ಜೆ.ಜಿ ನಾಗರಾಜ್ ಮಾತಾನಾಡಿ ವಿದ್ಯಾರ್ಥಿ ಹರಿಪ್ರಿಯ ತನ್ನದೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ. ಅವಳ ಸ್ಪೂರ್ತಿಗೆ ತಂದೆ ತಾಯಿಗಳ ಮಾರ್ಗದರ್ಶನ ಅತ್ಯಗತ್ಯವಾಗಿ ಕಂಡು ಬಂದಿದೆ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಕರೇಗೌಡ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಡಾ. ಶರಣಪ್ಪ ಗಬ್ಬೂರು, ನಿವೃತ್ತ ಪೊಲಿಸ್ ಅಧಿಕಾರಿ ರವೀಂದ್ರನಾಥ್, ನಿವೃತ್ತ ಇಂಜಿನಿಯರ್ ಬೆಮೆಲ್ ಶ್ರೀನಿವಾಸ್, ವೇಣುಸುಂದರಗೌಡ, ಮಂಜುಳ, ಶಿವಕುಮಾರ್, ಪ್ರಕಾಶ್, ರಾಜೇಶ್ವರಿ, ಹರೀಶ್, ಪ್ರೀತಂ, ಪುಷ್ಪ, ಮುಂತಾದವರು ಉಪಸ್ಥಿತರಿದ್ದರು.