ಹಾಸನ: ಪುಂಡಾನೆ ಸೆರೆ ಹಿಡಿಯಲು ಹೋದ ಸಂದರ್ಭದಲ್ಲಿ ಪುಂಡಾನೆ ದಾಳಿಗೆ ತುತ್ತಾಗಿ ಮೃತಪಟ್ಟ ಅರ್ಜುನ ಆನೆಗೆ ಇಂದು ಅಂತಿಮ ನಮನ ಸಲ್ಲಿಸಲಾಯಿತು.
ಅರಣ್ಯಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲಿನ ಸ್ಥಳೀಯರು ಆಗಮಿಸಿ ತಮ್ಮ ಅಂತಿಮ ನಮನಗಳನ್ನು ಸಲ್ಲಿಸಿದರು.ಎಂಟು ಬಾರಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ 63ವರ್ಷದ ಅರ್ಜುನನ ಅಗಲಿಕೆಯಿಂದ ಅಲ್ಲಿ ನೆರೆದಿದ್ದ ಅರಣ್ಯಾಧಿಕಾರಿಗಳು ಸೇರಿದಂತೆ ಮಾವುತರು ಮತ್ತಿತರರು ಬಿಕ್ಕಿ ಬಿಕ್ಕಿ ಅತ್ತರು.
ಅರಣ್ಯ ಅಧಿಕಾರಿಗಳ ಕಣ್ಣಂಚಲ್ಲಿ ನೀರು ತುಂಬಿ ಬಂದಿತ್ತು. ಆನೆಯನ್ನು ಸಲುಹುತ್ತಿದ್ದ ಕಾವಡಿಗ ವಿನು ಅವರಂತು ಆನೆಯ ಮೇಲೆ ಬಿದ್ದು ಬಿದ್ದು ಹೊರಳಾಡಿ ತನ್ನ ಆನೆಯನ್ನು ಎದ್ದೇಳುವಂತೆ ಗೋಗರೆಯುತ್ತಿದ್ದು ಎಲ್ಲರು ಕರಳು ಕಿತ್ತುಬರುವಂತಾಗಿತ್ತು.