ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಜರ್ನಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.ನಿರ್ದೇಶಕ ಅಗ್ನಿ ಮಾತನಾಡಿ, 5 ಜನ ಸ್ನೇಹಿತರ ನಡುವೆ ನಡೆಯುವ ಕಥೆ. ಕಾಲೇಜ್ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ.
ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ತಿಳಿಸಿದರು.
ನಾಯಕ ದಿನಿ ಮಾತನಾಡಿ, ಅಗ್ನಿ ಅವರು ಕಥೆ ಹೇಳಿದರು. ಇಷ್ಟವಾಯ್ತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬರು ಕಣ್ಣೀರು ಬರುತ್ತದೆ. ಕ್ಲೈಮ್ಯಾಕ್ಸ್ ಗೂ ಮುನ್ನ ಪ್ರತಿಯೊಬ್ಬರ ಮುಖದಲ್ಲಿ ನಗು ಇರುತ್ತದೆ. ಕತೆ ಅದ್ಭುತವಾಗಿ ಮೂಡಿಬಂದಿದೆ. ನಮ್ಮಂತ ಹೊಸಬರಿಗೆ ನಿಮ್ಮ ಆಶೀರ್ವಾದ ಇರಲಿ ಎಂದರು.
ಒಂದಷ್ಟು ಸೀರಿಯಲ್ ಗಳಲ್ಲಿ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿರುವ ಹಾಗೂ ನಿರೂಪಕನಾಗಿ ಗುರುತಿಸಿಕೊಂಡಿರುವ ಅಗ್ನಿ ನಿರ್ದೇಶಕರಾಗಿ ಜರ್ನಿ ಸಿನಿಮಾ ಮೂಲಕ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕೆ ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜರ್ನಿ ಚಿತ್ರದ ಮೂಲಕ ದಿನಿ ಎಂಬ ಯುವ ಪ್ರತಿಭೆ ನಾಯಕನಾಗಿ ಬಣ್ಣ ಹಚ್ಚುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಪೃಥ್ವಿ ಸ್ಪೂರ್ತಿ ಚೇತನ್ ದುರ್ಗ ಕಾಣಿಸಿಕೊಳ್ಳಲಿದ್ದಾರೆ.
ಜರ್ನಿ..ಒಂದೊಳ್ಳೆ ಯೂತ್ ಎಂಟರ್ ಟೈನರ್ ಸಿನಿಮಾ. ಕಾಮಿಡಿ ಜೊತೆಗೆ ಎಮೋಷನಲ್ ಮಿಶ್ರಣವನ್ನ ಹದವಾಗಿ ಬೆರೆಸಿ ಚಿತ್ರ ಎಣೆಯಲಾಗಿದೆ. ನಿರ್ದೇಶಕರಾಗಿರುವ ಅಗ್ನಿ ಹರಿಪ್ರಸಾದ್ ನಾಯಕ್ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್ ಕುಮಾರ್ ಬಿಟಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಜರ್ನಿ ಚಿತ್ರಕ್ಕಿದೆ. ಡಿಸೆಂಬರ್ ಮೊದಲ ವಾರದಂದು ಜರ್ನಿ ಸಿನಿಮಾದ ಚಿತ್ರೀಕರಣ ಚಾಲುವಾಗಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಮಾಹಿತಿಯನ್ನು ಒಂದೊಂದಾಗಿ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.