ಬೆಂಗಳೂರು: ತಂದೆ-ತಾಯಿ ಬೇರೆಯಾಗಿದ್ದಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿ ನಡೆದಿದೆ.
ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನ ಲೇಖನಾ (೧೭) ಆತ್ಮಹತ್ಯೆಗೆ ಶರಣಾದ ಬಾಲಕಿ. ಲೇಖನಾ ೧೦ನೇ ತರಗತಿ ಅನುತ್ತೀರ್ಣ ಆಗಿ ಮನೆಯಲ್ಲಿಯೇ ಇದ್ದಳು. ತಂದೆ-ತಾಯಿ ಕೌಟುಂಬಿಕ ಕಲಹದಿಂದ ಇತ್ತೀಚಿಗೆ ದೂರವಾಗಿದ್ದರು. ತಂದೆ ಬೇರೆ ಕಡೆ ವಾಸವಿದ್ದರೆ, ಲೇಖನಾ ತಾಯಿ ಜೊತೆಗೆ ವಾಸವಿದ್ದರು. ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿ ಎಂಬ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದು ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬAಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.



