ಯಲಹಂಕ: ೧-೨-೨೦೨೬ ಭಾನುವಾರದಂದು ಯಲಹಂಕ ಉಪನಗರ ೪- ೫ನೇ ಹಂತದ ವಸತಿ ವತಿಯಿಂದ ಉಪನಗರ ೫ನೇ ಹಂತದ (ನಿಸರ್ಗ ಮೈದಾನ) ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಅದ್ಧೂರಿಯಿಂದ ಜರುಗಿತು.
ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಮತ್ತು ಉಪನಗರ ೪ನೇ ಮತ್ತು ೫ನೇ ಹಿಂದೂ ಸಮಾಜ ಬಾಂಧವರು,ಭಾರತ ಮಾತೆಯ ಭವ್ಯ ಮೂರ್ತಿ, ಸ್ಥಬ್ದ ಚಿತ್ರಗಳು ವಿವಿಧ ವಾದ್ಯಗಳೊಂದಿಗೆ ಉಪನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಯಲ್ಲಿ ಸಾಗಿದರು. ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಹಿಂದೂ ಸಮಾಜದ ಸದ್ಭಕ್ತರು, ಯುವಕರು, ಮಹಿಳೆಯರು, ಹಿರಿಯ ನಾಗರಿಕರು, ಯಲಹಂಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಈ ಶೋಭಾಯಾತ್ರೆಯ ಮೂಲಕ ಧಾರ್ಮಿಕ?ಸಾಂಸ್ಕöÈತಿಕ ಚೈತನ್ಯವನ್ನು ಮೂಡಿಸಿದರು.
ಈ ಶೋಭಾಯಾತ್ರೆ ಯಲಹಂಕ ಉಪನಗರದ ೪ನೇ ಹಂತದಲ್ಲಿರುವ ತರಕಾರಿ ಮಾರುಕಟ್ಟೆಯಿಂದ ನಿಸರ್ಗ ಕ್ರೀಡಾಂಗಣದ ವರೆಗೆ ಸಾಗಿದ್ದು, ನಿಸರ್ಗ ಕ್ರೀಡಾಂಗಣದಲ್ಲಿ ಶ್ರೀಯುತ ಪಟ್ಟಾಭಿರಾಮ್ ಅವರ ಹಿಂದುತ್ವ ಉಳಿವಿಗಾಗಿ ಜಾಗೃತಿಗೊಳಿಸುವ ದಿಕ್ಸೂಚಿ ಭಾಷಣದ ನಂತರ ಸ್ವಾಮಿ ವಿವೇಕಾನಂದ ಆಶ್ರಮದ ಶ್ರೀ ಶ್ರೀ ಅಭಯಾನಂದ ಸ್ವಾಮೀಜಿ ಅವರು ಬದುಕು ಸಾಗಿಸುವ ಹೋರಾಟದಲ್ಲೇ ಮುಳುಗಿದ್ದ ಸಮಾಜ ಬಾಂಧವರಲ್ಲಿ ಕಣ್ತೆರೆಸುವ ಆಶೀರ್ವಚನ ನೀಡಿದರು. ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಭಕ್ತಿಭಾವ, ಶಿಸ್ತಿನಿಂದ ಆಚರಿಸಲ್ಪಟ್ಟಿತು.
ಯಲಹಂಕ ಉಪನಗರದಲ್ಲಿ ಅದ್ಧೂರಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ



