ದೇವನಹಳ್ಳಿ : ನರೇಂದ್ರ ಮೋದಿ ನಾಯಕತ್ವದ ಕೇಂದ್ರದ ಎನ್ಡಿಎ ಸರ್ಕಾರದ ನೂತನ ಭೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.ದೆಹಲಿಯಿಂದ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಆಗಮಿಸಿದ ಕುಮಾರಸ್ವಾಮಿಯವ ರನ್ನು ಜೆಡಿಎಸ್ನ ಅಪಾರ ಮುಖಂಡರು, ಬಿಜೆಪಿ ಕಾರ್ಯಕರ್ತರು ಟೋಲ್ ಬಳಿ ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ಬೃಹತ್ ಸೇಭಿನ ಹಾರ, ಮೂಸಂಬಿ ಹಾರ, ಮಲ್ಲಿಗೆ ಹೂವಿನ ಹಾರಗಳೊಂದಿಗೆ ಸ್ವಾಗತಿಸಿದ ಮುಖಂಡರುಗಳು, ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯಾದ್ಯಂತ ಕಾರ್ಯಕರ್ತರು ಸಾರ್ವಜನಿಕರು ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಅಧಿಕ ಜನ ಸೇರಿದ್ದು ವಿಶೇಷವಾಗಿತ್ತು.
ಕುಮಾರಸ್ವಾಮಿಯವರ ಜೊತೆಯಲ್ಲಿಯೇ ಕೋಲಾರ ಸಂಸದ ಮಲ್ಲೇಶ್ ಬಾಬು ಸಹ ಆಗಮಿಸಿದ್ದು ಜೆಡಿಎಸ್ ಪಾಳೆಯದಲ್ಲಿ ಹೊಸ ಹುರುಪು ಬಂದಿದ್ದಂತು ಸತ್ಯ, ಕಾರ್ಯಕರ್ತರು ಕುಮಾರಸ್ವಾಮಿಯವರ ವಾಹನದ ಮೇಲೆ ಜೆಸಿಬಿಗಳಲ್ಲಿ ಕುಳಿತು ಹೂವುಗಳನ್ನು ಚೆಲ್ಲಿ ಸಂತಸ ವ್ಯಕ್ತಪಡಿಸಿದರು.ಈ ಸಮಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಿ ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾಗಿರುವ ಎನ್.ಡಿ. ಸರ್ಕಾರದಲ್ಲಿ ಉನ್ನತ ಹುದ್ದೆ ನೀಡಿದ್ದಾರೆ ಅದಕ್ಕೆ ನಾನು ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ,
ಇದಕ್ಕೆ ಕಾರಣ ನಿಮ್ಮೆಲ್ಲರ ಶ್ರಮ, ಮಂಡ್ಯ ಜನತೆ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಚಿರ ಋಣಿಯಾಗಿರುತ್ತೇನೆ, ನಮ್ಮ ರಾಜ್ಯದ ರೈತರ ಅನೇಕ ಸಮಸ್ಯೆಗಳನ್ನು ನಿವಾರಿಸಲು ಕೃಷಿ ಸಚಿವರ ಜೊತೆ ಚರ್ಚಿಸಿ ಬಗೆ ಹರಿಸಲು ಪ್ರಯತ್ನಿಸುತ್ತೇನೆ, ಮೋದಿಯವರ ಕೃಪೆ ಕರ್ನಾಟಕದ ಮೇಲೆ ಇದೆ, ನಾನು ವಾರದ 5ದಿನ ದೆಹಲಿಯಲ್ಲಿ ಇದ್ದು ಇಲಾಖೆಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ತಿಳಿಯಬೇಕಿದ್ದು ಹಂತಹಂತವಾಗಿ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
ಬಯಲು ಸೀಮೆ ಪ್ರದೇಶಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ರೈತರಿಗೆ ಸಾರ್ವಜನಿಕರಿಗೆ ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರನ್ನು ಒದಗಿಸಲು ಹೊಸ ಯೋಜನೆಗಳನ್ನು ರೂಪಿಸಿ ಸಂಬಂಧಪಟ್ಟ ಇಲಾಖೆಗಳ ಸಚಿವರಲ್ಲಿ ಮನವಿ ಮಾಡಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಳಿಕೊಳ್ಳುತ್ತೇನೆ, ನಾನು ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ ಇಡೀ ಭಾರತದ ಎಲ್ಲಾ ರಾಜ್ಯಗಳ ಅಭಿವೃದ್ದಿಗೆ ಕೆಲಸ ಮಾಡಬೇಕು,
ಇನ್ನೂ ನಮ್ಮ ಸರ್ಕಾರ ರಚನೆಯಾಗಿ ವಾರವಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಭೃಹತತ ಕೈಗಾರಿಕೆ ಇಲಾಖೆಯಿಂದ ಲಕ್ಷಾಂತರ ಉದ್ಯೋಗ ಸೃಷ್ಠಿಯಾಗಲಿದ್ದು, ವಿದ್ಯಾವಂತ ನಿರುದ್ಯೋಗಿಗಳು ಯಾವುದೇ ರಾಜ್ಯದಲ್ಲಾಗಲಿ ಕೆಲಸ ಮಾಡಲು ಸಿದ್ದರಿರಬೇಕು, ಕೆಲಸ ಕೊಡಿಸುವಲ್ಲಿ ನಾನು ಸಹಕರಿಸುತ್ತೇನೆ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ದೇಶದಲ್ಲಿಯೇ ಒಂದು ಹೊಸ ಮೈಲಿಗಲ್ಲನ್ನು ಸೃಷ್ಠಿಸುತ್ತೇನೆ, ನಾನು ಯಾವುದೇ ವಿರೋಧ ಪಕ್ಷಗಳ ನಾಯಕರುಗಳ ಉದ್ದಟತನದ ಮಾತುಗಳನ್ನು ತಿರಸ್ಕರಿಸಿ, ನನ್ನ ರಾಜ್ಯದ ಜನತೆಯ ಆಶೋತ್ತರಗಳನ್ನು ಬಗೆಹರಿಸಲಿದ್ದೇನೆ.
ಕರ್ನಾಟಕದಲ್ಲಿ ನಾನಿಲ್ಲದಿದ್ದರೂ ನನ್ನ ಪರವಾಗು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇರುವುದರಿಂದ ತಮ್ಮ ಯಾವುದೇ ಬಿನ್ನಹಗಳಿದ್ದರೂ ಅವರಬಳಿ ತಿಳಿಸಿ, ರಾಜ್ಯದ ಜೆಡಿಎಸ್ನ ಮುಖಂಡರುಗಳು ನಿಖಿಲ್ರನ್ನು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಕರೆದುಕೋಡು ನಮ್ಮ ಕಾರ್ಯಕರ್ತರ ಸಂಕಷ್ಠಗಳನ್ನು ನಿವಾರಿಸಿ, ಇದು ದೇವೇಗೌಡರ, ಕುಮಾರಸ್ವಾಮಿಯವರ ಪಕ್ಷವಲ್ಲಿ ನಿಮ್ಮ ಪಕ್ಷ ನಿಮ್ಮಿಂದ ಜೆಡಿಎಸ್ ಎಂದರು.
ಶಿಡ್ಲಘಟ್ಟದ ಶಾಸಕ ಬಿ.ಎನ್.ರವಿಕುಮಾರ್ಈ ಒಂದು ಅದ್ದೂರಿ ಸ್ವಾಗತವನ್ನು ಏರ್ಪಡಿಸಿಅಲ್ಲಿಂದ ಸಾವಿರಾರು ಕಾರ್ಯಕರ್ತರನ್ನು ಕರೆತಂದಿದ್ದಾರೆ, ದೇವನಹಳ್ಳಿಯ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಯೂತ್ ಅಧ್ಯಕ್ಷ ಟಿ.ರವಿ, ಕೂಡ ಇದರಲ್ಲಿ ಭಾಗವಹಿಸಿದ್ದಾರೆ, ಬಹುತೇಕ ದೇವನಹಳ್ಳಿ ತಾಲೂಕಿನ ಕಾರ್ಯಕರ್ತರೇ ಎದ್ದು ಕಾಣುತ್ತಿದ್ದಾರೆ, ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ ದೊಡ್ಡಬಳ್ಳಾಪುರದಿಂದಲೂ ಜನರು ಆಗಮಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಎಂದರು.
ಈ ಸಮಯದಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕ ಜಿ.ಟಿ. ದೇವೇಗೌಡ, ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ರಾಜ್ಯ ಜೆಡಿಎಸ್ ಯೂತ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶ್ರೀನಿವಾಸಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾದೂರು ರಘು, ಬಂಕ್ ಮುನಿಯಪ್ಪ, ಆರ್.ಎ. ಉಮೇಶ್, ಗಜೇಂದ್ರಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್, ಮುನೇಗೌಡ, ಪ್ರ.ಕಾರ್ಯದರ್ಶಿ ಜಿ.ಎ. ರವೀಂದ್ರ, ಕಾರಹಳ್ಳಿ ಗ್ರಾ.ಪಂ. ಅಧ್ಯಕ್ಷ ರಮೇಶ್, ರಮೇಶ್ ಕುಮಾರ್, ಹುರುಳುಗುರ್ಕಿ ಶ್ರೀನಿವಾಸ್, ಟಿ.ಹೊಸಹಳ್ಳಿ ಟಿ. ರವಿ, ದೊಡ್ಡಸಣ್ಣೆ ಮುನಿರಾಜು, ಪುರಸಭಾ ಸದಸ್ಯ ಎಸ್. ನಾಗೇಶ್, ಬೈಚಾಪುರ ವೇಣುಗೋಪಾಲ್, ಶಶಿಕುಮಾರ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.