ಮೈಸೂರು: ಬೆಂಗಳೂರು ಜೆ.ಸಿ. ರಸ್ತೆ ನಯನ ರಂಗಮAದಿರದಲ್ಲಿ, ಸ್ಮೆöÊಲ್ ಶಿವು ರವರ ನೇತೃತ್ವದಲ್ಲಿ ನಡೆದ ಎಸ್.ಎಸ್. ಕಲಾಸಂಗಮ ವೇದಿಕೆಯಲ್ಲಿ ಸಂಕ್ರಾಂತಿ ಸಂಭ್ರಮ ಆಚರಣೆ ಸಂದರ್ಭದಲ್ಲಿ, ಅರಸಿಕೆರೆ ಆಶಾ ಗುರುಲಿಂಗಯ್ಯ ರವರು ರಚಿಸಿದ, ಮುಳ್ಳಿನ ಗುಲಾಬಿ ಕಾದಂಬರಿಯನ್ನು ಬಿಡುಗಡೆ ನೆರವೇರಿಸಿ ಮಾತನಾಡಿದ ಖ್ಯಾತ ಸಾಹಿತಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ರವರು ಮುಳ್ಳಿನ ಗುಲಾಬಿ ಇದೊಂದು ಉತ್ತಮ ಕಾದಂಬರಿಯಾಗಿದ್ದು, ಹೆಣ್ಣಿನ ಶೋಷಣೆ – ಸಮಾಜದಲ್ಲಿ ಬದುಕಲು ನೂರಾರು ಸಂಕಷ್ಟಗಳನ್ನು ಎದುರಿಸಿ ಬಾಳುವ ಹೆಣ್ಣಿನ ಬಗ್ಗೆ ಬರೆದಿರುವ ಆಶಾ ಗುರುಲಿಂಗಯ್ಯ ರವರಿಗೆ ಅಭಿನಂದನೆ ಸಲ್ಲಿಸಿದರು.
ಬದುಕು ಬದುಕಲಾಗದೆ, ಸಂತೋಷವನ್ನು ಅನುಭವಿಸಲಾಗದೆ ಹೆಣ್ಣು ಪಡುವ ಕಷ್ಟಗಳ್ಳಾನ್ನಾಧಾರಿತ ಮುಳ್ಳಿನ ಗುಲಾಬಿ ಉತ್ತಮ ಕದಾಂಬರಿ ಎಂದು ಖ್ಯಾತ ನಟಿ ಗಿರಿಜಾ ಲೋಕೇಶ್ ನುಡಿದರು, ನಾಡಿಗೆ ಇಂತಹ ಕಾದಂಬರಿ ಅವಶ್ಯಕ ಎಂದ ನಟ ಶಶಿಧರ್ ಕೋಟೆ, ಇದೊಂದು ಅಪರೂಪದ ಕಾದಂಬರಿ ಹಾಸ್ಯ ನಟ ಮೈಸೂರು ರಮಾನಂದ್ ರವರ ಅಭಿಪ್ರಾಯ.
ಈ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟರು, ಸಾಹಿತಿಗಳ ಸಮ್ಮುಖದಲ್ಲಿ ನನ್ನ ಕಾದಂಬರಿ ಬಿಡುಗಡೆ ಮಾಡಲು ಸ್ಮೆöÊಲ್ ಶಿವು ರವರ ಆಸಕ್ತಿ ಮತ್ತು ಸೇವೆ ಮರೆಯಲಾಗುವುದಿಲ್ಲ ಎಂದು ಕಾದಂಬರಿಗಾರ್ತಿ ಆಶಾ ಗುರುಲಿಂಗಯ್ಯ ರವರು ಸ್ಮೆöÊಲ್ ಶಿವುರವರಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಎಸ್.ಎಸ್. ಕಲಾಸಂಗಮದ ವತಿಯಿಂದ ಹಲವಾರು ಸಾಮಾಜಿಕ ಕಾರ್ಯಕ್ರಮ ನೆರವೇರಿಸಿರುವುದು ಶ್ಲಾಘನೀಯ ಎಂದರು.
ಚಿತ್ರ: ಜಿ.ಎಲ್. ಸಂಪಂಗಿ ರಾಮುಲು
ಎಸ್.ಎಸ್. ಕಲಾಸಂಗಮ ವೇದಿಕೆಯಲ್ಲಿ ಲೋಕಾರ್ಪಣೆಗೊಂಡ `ಮುಳ್ಳಿನ ಗುಲಾಬಿ’ ಉತ್ತಮ ಕಾದಂಬರಿ: ಬಿ.ಟಿ. ಲಲಿತಾ ನಾಯಕ್



