This is the title of the web page
This is the title of the web page

ಅತಿಥಿ ಶಿಕ್ಷಕರಿಗೆ ಸಹಾಯ ಹಸ್ತ

ಮಾಲೂರು:  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ವೇತನಕ್ಕಾಗಿ ಪ್ರತಿಭಟನೆ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಬಿಜೆಪಿ ಫಲಾನುಭವಿಗಳ ಪ್ರಕೋಸ್ಟ ರಾಜ್ಯ ಸಮಿತಿ ಸದಸ್ಯ ಹೂಡಿ ವಿಜಯ್ ಕುಮಾರ್ ಸಹಾಯ ಹಸ್ತ ನೀಡಿ ಧೈರ್ಯ ತುಂಬಿದರು.
ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪೀಪಲ್ ಪರ್ ಇಂಡಿಯಾ ಫೌಂಡೇಶನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಲೂರು ಇವರುಗಳ ಒಡಂಬಡಿಕೆಯಿಂದ 2022- 23 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಕಡೆ ಅತಿಥಿ ಶಿಕ್ಷಕರಾಗಿ ನೇಮಕ ಪ್ರಕ್ರಿಯೆಯನ್ನು 2022 ಮೇ 28 ರಂದು ಬಿ ಆರ್ ಸಿ ಕಚೇರಿಯಲ್ಲಿ ಸಂದರ್ಶನದ ಮೂಲಕ ಆಯ್ಕೆ ಮಾಡಿ 10 ಸಾವಿರ ರೂಗಳ ಗೌರವಧನವನ್ನು ನೀಡುವುದಾಗಿ ತಿಳಿಸಿ ಜೂನ್ 1 ರಿಂದ ಮಾರ್ಚ್ 31ರವರೆಗೆ 10 ತಿಂಗಳ ಕಾಲ ಆಯ್ಕೆ ಮಾಡಿರುವ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ನೇಮಕಾತಿ ಪತ್ರ ನೀಡಿದೆ.

ಅದರಂತೆ ಕರ್ತವ್ಯ ನಿರ್ವಹಿಸಿರುವ ಅತಿಥಿ ಶಿಕ್ಷಕರಿಗೆ ವೇತನ ನೀಡದೆ ವಿಳಂಬ ಮಾಡುತ್ತಿರುವ ಖಾಸಗಿ ಸಂಸ್ಥೆಯ ಮುಖ್ಯಸ್ಥರಿಗೆ ಕರೆ ಮಾಡಿ ತಿಳಿಸಿ ಹಲವಾರು ಬಾರಿ ವೇತನ ಕೇಳಿದರು. ಸತಾಯಿಸಿಕೊಂಡು ಇದುವರೆಗೂ ಬಂದಿದ್ದು 2024 ರ ಮಾರ್ಚ್ 31ಕ್ಕೆ ಗಡುವ ಮುಗಿಯುತ್ತಾ ಬಂದಿದ್ದು, 10 ತಿಂಗಳ ವೇತನ ಕೊಡಲು ಮುಂದೆ ಬರದ ಸಂಸ್ಥೆಯವರ ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದು, ಈಗ ಸಂಸ್ಥೆಯವರ ಫೋನುಗಳು ಸ್ವಿಚ್ ಆಫ್ ಆಗಿದ್ದು, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುಸಲ್ಲಿಸಿ ನ್ಯಾಯ ಕೊಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಕಾಲ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸ್ಥಳಕ್ಕೆ ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ಭೇಟಿ ನೀಡಿ ಪ್ರತಿಭಟನೆ ನಿರತ ಅತಿಥಿ ಶಿಕ್ಷಕರ ಅಹವಾಲುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ತಿಳಿಸಿ ಸಹಾಯ ಅರ್ಥವನ್ನು ನಿಡುವ ಮೂಲಕ ಧೈರ್ಯ ತುಂಬಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ ರವರು ಪ್ರತಿಭಟನೆಯ ನಿರತ ಅತಿಥಿ ಶಿಕ್ಷಕರೋಡನೆ ಚರ್ಚಿಸಿ ಮುಂದಿನ ಒಂದು ವಾರದೊಳಗೆ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಸಂಬಂಧಪಟ್ಟ ಸಂಸ್ಥೆ ಯವರನ್ನು ಪತ್ತೆ ಹಚ್ಚಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.