ಮಳವಳ್ಳಿ: ಪಟ್ಟಣದಲ್ಲಿ ಐತಿಹಾಸಿಕ ಸಿಡಿಹಬ್ಬವು ಇಂದಿನಿAದ ಬಹಳ ವಿಜೃಂಭಣೆಯಿAದ ನಡೆಯಿತು.
ದೊಡ್ಡಕೆರೆ ಸಮೀಪವಿರುವ ಶ್ರೀಪಟ್ಟಲದಮ್ಮ ದೇವರುಗಳಾದ ಚಿಕ್ಕಮ್ಮ ತಾಯಿ ದೊಡ್ಡಮ್ಮತಾಯಿಗಳಿಗೆ ಬೆಳಗ್ಗೆಯಿಂದಲೇ ಹೋಮ-ಹವನ, ಪೂಜೆ- ಪುರಸ್ಕಾರಗಳನ್ನು ನಡೆಸಿ, ಸರತಿ ಸಾಲಿನಲ್ಲಿ ಭಕ್ತರು ನಿಂತು ತಾಯಿಯ ದರ್ಶನವನ್ನು ಪಡೆದರು. ಭಕ್ತರು ತಾಯಿಗೆ ಹೂವು ಹಣ್ಣು ತಂಬಿಟ್ಟಿನ ಆರತಿಯನ್ನು ನೀಡಿ ತಾಯಿಯ ದರ್ಶನ ಪಡೆದು ಪುನೀತರಾದರು.
ರಾತ್ರಿ ಹನ್ನೆರಡು ಗಂಟೆಗೆ ಸಿಡಿರಣ್ಣ ಬಂಡಿಯು ಅಲಂಕಾರಗೊAಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶನಿವಾರ ಬೆಳಗ್ಗೆ ೧೦ ಗಂಟೆಗೆ ಸಿಡಿ ಬಂಡಿ ಬಂದು ನಿಲ್ಲುತ್ತದೆ. ನಂತರ ಕೊಂಡೋತ್ಸವ ನಡೆಯಲಿದ್ದು ಸಿಡಿರಣ್ಣನಿಗೆ ಹೂವನ್ನು ಜವನ ಎಸೆದು ಭಕ್ತರು ಪುನೀತರಾಗುತ್ತಾರೆ. ಪಟ್ಟಣದ ಮೈಸೂರ್ ರಸ್ತೆ ಮದ್ದೂರ್ ರಸ್ತೆ ಕೊಳ್ಳೇಗಾಲ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷರಾದ ಸತೀಶ್ ರವರು ಇಂದು ಭಕ್ತರಿಗೆ ಪೂಜಾ ಪುರಸ್ಕಾರಗಳನ್ನು ನೆರವೇರಿಸಿ ಕೊಟ್ಟರು.
ಐತಿಹಾಸಿಕ ಸಿಡಿಹಬ್ಬ ಪ್ರಾರಂಭ



