ಗೌರಿಬಿದನೂರು: ಗೌರಿಬಿದನೂರು ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಬೃಹತ್ ಮಳೆ ಮರ ಧರೆಗುರಳುವ ಸ್ಥಿತಿಯಲ್ಲಿದೆ. ಆದ್ದರಿಂದ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡುದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಗೌರಿಬಿದನೂರು ಪಟ್ಟಣದ ರೈಲ್ವೇ ನಿಲ್ದಾಣದ ರಸ್ತೆಯ ಪ್ರಾರಂಭದಲ್ಲೇ 90 ವರ್ಷಗಳಷ್ಟು ಹಳೆಯದಾದ ಮಳೆ ಮರ ಇದೆ. ಈ ಮರ ಈಗಾಗಲೇ ರಸ್ತೆ ಕಡೆ ವಾಲಿದ್ದು, ಮುಂದಿನ ದಿನಗಳಲ್ಲಿ ಅಪಾಯ ತಂದೊಡ್ಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಮರ ಬೀಳುವ ಹಂತದಲ್ಲಿದೆ ಎಂದು ಅರಣ್ಯ ಇಲಾಖೆಯವರು 6-2-2024 ರಂದು ಹಾಜರು ಪ್ರಕ್ರಿಯೆ ಕೂಡ ಹಾಗಿದೆ ಅದರೂ ಸಹ ಅರಣ್ಯ ಇಲಾಖೆಯವರು ತೆರವುಗೊಳಿಸಲಿಲ್ಲ ,
ಆದರೂ ಮಳೆ ಮರ ಕಂಡರು ಕಾಣದಂತೆ ವರ್ತಿಸುತ್ತಿದ್ದಾರೆ. ಉರುಳಿ ಬೀಳು ಹಂತದಲ್ಲಿರುವ ಮರವನ್ನು ತೆರವು ಮಾಡಲು ಮುಂದಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪ್ರಾಣ ಬೀತಿಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.