ಬೆಂಗಳೂರು: ಸಿಸಿಬಿಯ ಮಾದಕ ದ್ರವ್ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು 8 ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಾದಕ ವಸ್ತುಗಳಾದ ಗಾಂಜಾ, ಆಫೀಂ, ಎಂ ಡಿ ಎಂ ಎ, ಆಶಿಶ್ ಆಯಿಲ್, ಚೇರಸ್, ಈ ಸಿಗರೇಟ್ ಗಳು ಹಾಗೂ ಇತರೆ ಡ್ರಗ್ಸ್ ಗಳನ್ನು, ಮತ್ತು ಮೂರು ಮೊಬೈಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಇವುಗಳ ಮೌಲ್ಯ ಎರಡು ಕೋಟಿ 25 ಲಕ್ಷಗಳಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಡ್ರಗ್ ಪೆಡ್ಲರ್ಗಳು ವಿವಿ ಪುರಂ ಮತ್ತು ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾರಾಟ ಮಾಡುತ್ತಿದ್ದರು.ಬೆಂಗಳೂರು ಸಿಸಿಬಿ ಪೊಲೀಸರು ಮೂರು ಜನ ವಿದೇಶಿ ಪ್ರಜೆಗಳನ್ನು ಬಂಧಿಸಿ 50 ಲಕ್ಷ ರೂ ಬೆಲೆ ಬಾಳುವ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಜಿನೆಸ್ ವೀಸಾ ಮೇಲೆ ಬಂದು ಮುಂಬೈ, ಗೋವಾ ಹಾಗೂ ದೆಹಲಿ ಕಡೆಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ಗಳನ್ನು ತರಿಸಿಕೊಂಡು ಇಲ್ಲಿ ಒಂದು ಗ್ರಾಂಗೆ 10 ರಿಂದ 12 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು.ಈ ಸಂಬಂಧ ಇವರುಗಳ ವಶ ದಲ್ಲಿದ್ದ ಅಫೀಮ, ಗಾಂಜಾ, ಎಂ ಡಿ ಎಂ ಎ, ಅಫೀಮ್ ಮತ್ತು ಇತರೆ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.