ಚಂದಾಪುರ: ಸಂವಿಧಾನವನ್ನು ನಾವು ಸರಿಯಾಗಿ ಅರಿತುಕೊಂಡಾಗ ಮಾತ್ರ ದೇಶದ ಆಡಳಿತ ಯಂತ್ರವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಸಾಧ್ಯ ಎಂದು ಹುಲಿಮಂಗಲ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಎಂ.ಗಜೇಂದ್ರ ತಿಳಿಸಿದರು.
ಅವರು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಗರ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಸರ್ಕಾರದ ವತಿಯಿಂದ ಹುಲಿಮಂಗಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ರಥಯಾತ್ರೆ ಚಾಲನೆ ನೀಡಿ ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನದ ಹಕ್ಕನ್ನು ಕೊಟ್ಟ ಫಲವಾಗಿ ನಾನು ಇಂದು ಪಂಚಾಯತಿಯಲ್ಲಿ ಅಧಿಕಾರದಲ್ಲಿ ಇದ್ದು ಜನ ಸೇವೆಯನ್ನು ಮಾಡುತ್ತಿದ್ದಿನಿ ಇದೇ ರೀತಿಯಲ್ಲಿ ಈ ದೇಶದಲ್ಲಿ ಅಧಿಕಾರ ಹಾಗೂ ಆಡಳಿತವನ್ನು ಕಾನೂನಿನ ಚೌಕಟ್ಟಿನೊಳಗೆ ಶಾಂತಿಯುತವಾಗಿ ಕಾರ್ಯ ನಿರ್ವಹಿಸಲು ನಮ್ಮ ಸಂವಿಧಾನವು ಕೊಡುಗೆಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಪಿಳ್ಳಮ್ಮ ಮಾತನಾಡಿ ಈ ದೇಶದ ಪ್ರಜೆಗಳಾದ ನಾವು ಪ್ರತಿಯೊಬ್ಬರೂ ಸಂವಿಧಾನದ ಫಲಾನುಭವಿಗಳಾಗಿದ್ದಿವಿ ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವ ಈ ದೇಶದ ಆತ್ಮದಂತೆ ಇರುವ ಈ ಸಂವಿಧಾನವನ್ನು ಭಕ್ತಿ ಭಾವದಿಂದ ಗೌರವಿಸುದರ ಜೊತೆಯಲ್ಲಿ ಇದರ ಸಂರಕ್ಷಣೆ ಮತ್ತು ಜಾರಿಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ,
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ, ಆನೇಕಲ್ ಸಹಾಯಕ ನಿರ್ದೇಶಕರಾದ ಮಂಜುನಾಥ್, ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಬೋಧಿಸಿದರು ಕೋಲಾರದ ಜಾನಪದ ಕಲಾತಂಡದ ನಾಯಕ ಚಿಕ್ಕರೆಡ್ಡಪ್ಪ ನೇತೃತ್ವದಲ್ಲಿ ಅಂಬೇಡ್ಕರ್ ಕುರಿತಾದ ಕ್ರಾಂತಿಗೀತೆಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗುತಂದಿತು.
ಅಧ್ಯಕ್ಷೆ ಪಿಳ್ಳಮ್ಮ, ಮಾಜಿ ಅಧ್ಯಕ್ಷ ಸೈಯದ್ ಸಾದಿಕ್,ಉಪಾಧ್ಯಕ್ಷ ಮೆಹಬೂಬ್ ಷರೀಫ್ ಸೇರಿದಂತೆ ಹಲವರು ಭಾಗವಹಿಸಿದ್ದರು.