ಚಳ್ಳಕೆರೆ: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಲಾರಿ ಸೇತುವೆ ಕೆಳಗೆ ಪಲ್ಟಿಯಾಗಿ ಲಾರಿಯಲ್ಲಿದ್ದ. ಇಬ್ಬರು ಸೀನಿಮಿಯ ರೀತಿ ಪಾರಾಗುವ ಘಟನೆ ನಡೆದಿದೆ.
ಬೆಂಗಳೂರು ರಸ್ತೆಯ ಬಳ್ಳಾರಿ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿರುವ ಬನಶ್ರೀ ವೃದ್ಧಾಶ್ರಮದ ಸೇತುವೆ ಬಳಿ ಅಪಘಾತ ನಡೆದಿದೆ. ಮೃತ ಬೈಕ್ ಸವಾರ ರಂಗಸ್ವಾಮಿ. ಸಿದ್ದಾಪುರದ ಬೆಸ್ಕಾಂ ಲೈನ್ ಮ್ಯಾನ್ ಆಗಿದ್ದರು.
ಲೈನ್ ಮ್ಯಾನ್ ರಂಗಸ್ವಾಮಿ ಚಳ್ಳಕೆರೆ ನಗರದಿಂದ ಬೆಂಗಳೂರು ರಸ್ತೆಯ ಸಿದ್ದಾಪುರಕ್ಕೆ. ತಮ್ಮ ಬೈಕ್ ನಲ್ಲಿ ಬರುತ್ತಿದ್ದು. ಸಿದ್ದಾಪುರ ಕಡೆಯಿಂದ ಲಾರಿಯ ಓವರ್ ಟೇಕ್ ಮಾಡಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಸೇತುವೆ ಕೆಳಗೆ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ ಇದ್ದ ಡ್ರೈವರ್ ಹಾಗೂ ಕ್ಲೀನರ್ ಆಶ್ಚರ್ಯ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬೈಕ್ ಸವಾರ ರಂಗಸ್ವಾಮಿ ಸ್ಥಳದಲ್ಲೇ ಮೃತರಾಗಿದ್ದಾರೆ. ಸಾರ್ವಜನಿಕರಿಂದ ವಿಷಯ ತಿಳಿದ. ಚಳ್ಳಕೆರೆಯ ಡಿವೈಎಸ್ಪಿ ರಾಜಣ್ಣ ಹಾಗೂ ನಗರ ಪೊಲೀಸ್ ನಿರೀಕ್ಷಕ ಆರ್ ಎಫ್ ದೇಸಾಯಿ ತಳಕ್ಕೆ ಆಗಮಿಸಿ. ಗಾಯಾಳುಗಳನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ. ಈ ಅಪಘಾತದ ಪ್ರಕಾರಣದ ಕೇಸನ್ನು ದಾಖಲಿಸಿ. ಮುಂದಿನ ತನಿಖೆ ನಡೆಸುತ್ತಿದ್ದಾರೆ.