ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪ್ರೇಯಸಿಯ ಪತಿಯನ್ನು ಪ್ರಿಯಕರ ಕೊಲೆ ಮಾಡಿರುವ ದಾರುಣ ಘಟನೆ ಬಂಡೇಪಾಳ್ಯದಲ್ಲಿ ನಡೆದಿದೆ.
ಸುನೀಲ್ ನಾಯಕ್ ಕೊಲೆಯಾದವರು, ಕೃತ್ಯ ನಡೆಸಿದ ಪ್ರಿಯಕರ ಬಸುದೇವ್ ಮಲ್ಲಿಕ್ ನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಸುನೀಲ್ ನಾಯಕ್ ಪತ್ನಿಯೊಂದಿಗೆ ಆರೋಪಿ ಬಸುದೇವ್ ಮಲ್ಲಿಕ್ ಸಲುಗೆ ಹೊಂದಿದ್ದು, ಈ ವಿಚಾರ ತಿಳಿದು ಸುನೀಲ್ ನಾಯಕ್ ಗಲಾಟೆ ಮಾಡಿದ್ದನು. ಇದರಿಂದ ಕೋಪಗೊಂಡ ಆರೋಪಿ ಬಸುದೇವ್ ನಾಯಕ್ ಮದ್ಯಪಾನ ಮಾಡುವ ನೆಪದಲ್ಲಿ ಒಟ್ಟಿಗೆ ಸೇರಿ ಕಂಠಪೂರ್ತಿ ಕುಡಿಸಿ ಸುನೀಲ್ ನಾಯಕ್ನನ್ನ ಕೊಲೆ ಮಾಡಿದ್ದನು.



