ತಿ. ನರಸೀಪುರ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿರುವ ಘಟನೆ ಕುರು ಬೋಳನಹುಂಡಿ ಗ್ರಾಮದಲ್ಲಿ ನಡೆದಿದೆ.
ತಲಕಾಡು ಹೋಬಳಿಯ ಕುರುಬೊಳನಹುಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ರಾಜುರವರ ಬಾಳೆ ತೋಟದಲ್ಲಿ ಅರಣ್ಯ ಇಲಾಖೆಯ ಅಳವಡಿಸಿದ್ದ ಬೋನಿಗೆ 2.ವರೆ ವರ್ಷದ ಗಂಡು ಚಿರತೆ ಬಿದ್ದಿದೆ.
ಚಿರತೆಯ ಹಾವಳಿಯಿಂದಾಗಿ ರಾತ್ರಿ ಸಮಯದ ಓಡಾಟ ವನ್ನು ರೈತರ ಕಡಿಮೆ ಮಾಡಿದ್ದು ತಮ್ಮ ಜಮೀನುಗಳಲ್ಲಿ ನೀರನ್ನು ಹಾಯಿಸಲು ಹೋಗದೆ ಭಯ ಭೀತಿಗೊಂಡು ಕುರುಬೋಳನಹುಂಡಿ ಗ್ರಾಮಸ್ಥರು ಮತ್ತು ರೈತರು ಹೈರಾಣಾಗಿದ್ದರು. ಭಾನುವಾರ ರಾತ್ರಿ ರಾಜು ಎಂಬುವರ ಬಾಳೆ ತೋಟದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ರಾತ್ರಿ ಚಿರತೆ ಬಿದ್ದಿದ್ದು. ಚಿರತೆ ಸೆರೆಸಿಕ್ಕ ಹಿನ್ನೆಲೆ ಗ್ರಾಮಸ್ಥರು ನಿಟ್ಟಿಸಿರು ಬಿಡುವಂತಾಯಿತು.
ಚಿರತೆಯ ಹಿಡಿಯುವ ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ತಲಕಾಡು ಮೀಸಲು ಅರಣ್ಯ ಪ್ರದೇಶದ ಅರಣ್ಯ ಅಧಿಕಾರಿ ನಾಗರಾಜು , ಲೋಕೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.