ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಎಸ್ಐಎಲ್ ಬಿಲ್ಡಿಂಗ್ ಬಳಿ ಸ್ವಾಮಿ 45 ವರ್ಷ ಎಂಬವನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದೆ. ಮೃತ ಸ್ವಾಮಿ ಮೂಲತಹ ಹಿರಿಯೂರು ತಾಲೂಕಿನವನಾಗಿದ್ದು ಇಲ್ಲಿ ಗಾರೆ ಕೆಲಸ ಮಾಡುತ್ತಿದ್ದನು ಎಂದು ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ.
ಯಾವ ಕಾರಣಕ್ಕೆ ಕೊಲೆ ನಡೆಯಿತು ಎಂದು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುತ್ತಾರೆ. ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಶಿನಕುಂಟೆಯಲ್ಲಿ ನಾಗರಾಜ್ 38 ವರ್ಷ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಏನು ಕೆಲಸ ಮಾಡದೆ, ಹಾಗೂ ಯಾವ ಕಾರಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ತಿಳಿದಿಲ್ಲವೆಂದು ಪೊಲೀಸರು ತಿಳಿಸಿರುತ್ತಾರೆ.