ಬೆಂಗಳೂರು: ಅತಿಯಾಗಿ ಮದ್ಯ ಸೇವನೆ ಮಾಡಿ ಬಿಸಿಲಿನ ಜಳ ತಾಳಲಾರದೆ ಕೆರೆಗೆ ಈಜಲು ಹೋಗಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವ ಕೊಡಿಗೆಹಳ್ಳಿಯಲ್ಲಿ ಜರುಗಿದೆ.
ಗೋಪಾಲಪುರ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಪ್ರಭು(30) ಹಾಗೂ ವಿಜಿ ಆತನ ಸ್ನೇಹಿತರಿಬ್ಬರು ಮಧ್ಯಪಾನ ಮಾಡಿ ಬಿಸಿಲಿನ ಜಳ ತಾಳಲಾರದೆ ಕೆರೆಗೆ ಹೋಗಿ ಈಜಾಡುತ್ತೇನೆಂದು ಪ್ರಭು ಹೋಗಿ ಈಜಲು ಸಾಧ್ಯವಾಗದೆ ಕೆರೆಯ ಮಧ್ಯದಲ್ಲಿ ಸಿಕ್ಕಿ ಹೊರಗಡೆ ಬರಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ.
ಈತನ ಸ್ನೇಹಿತ ವಿಜಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಠಾಣೆಗೆ ದೂರನ್ನು ನೀಡಿರುತ್ತಾನೆ, ಅಗ್ನಿಶಾಮಕ ದಳದ ರಕ್ಷಣಾ ತಂಡ ಶವವನ್ನು ಇಂದು ಬೆಳಿಗ್ಗೆ ಕೆರೆಯಿಂದ ಹೊರಗಡೆ ತೆಗೆದಿರುತ್ತಾರೆ.
ಮೃತ ಪ್ರಭು ಲಿಂಗರಾಜುಪುರ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾನೆ.



