ಬೆಂಗಳೂರು: ಹುಳಿಮಾವು ಪೊಲೀಸರು ಮಾಟ ಮಾಡಿರುವುದನ್ನು ಬಿಡಿಸಿ ನಿಧಿ ತೆಗೆಸಿ ನೀಡುವುದಾಗಿ ನಂಬಿಸಿ ಮೋಸ ಮಾಡಿ ಚುನಾವಣಾಗಳನ್ನು ಕಳವು ಮಾಡಿದ್ದ ದಾದಾ ೪೯ ಕೋಲಾರ ಜಿಲ್ಲೆ ಈತನನ್ನು ಬಂಧಿಸಿ ಅಂದಾಜು ೫೦೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ ಇವುಗಳ ಮೌಲ್ಯ ೫೩ ಲಕ್ಷ ರೂಪಾಯಿಗಳಾಗಿರುತ್ತದೆ.
ಆರೋಪಿ ದಾದಾಪೀರ್ ಸೆಪ್ಟೆಂಬರ್ ೨೬ರಂದು ಬನ್ನೇರುಘಟ್ಟ ರಸ್ತೆಯ ಕೋಳಿ ಫಾರಂ ಗೇಟ್ ಬಳಿ ಓರ್ವ ವ್ಯಕ್ತಿ ಅನುಮಾನ ಪದವಾಗಿ ನಿಂತಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತನು ಸಾರ್ವಜನಿಕರನ್ನು ಮರಳು ಮಾಡಿ ಮಾಟ ಮಂತ್ರ ಮಾಡಿರುವುದನ್ನು ತೆಗೆಯುವುದಾಗಿ ಮತ್ತು ನಿಧಿ ತೆಗೆಸಿ ನೀಡುವುದಾಗಿ ನಂಬಿಸಿ ಅವರಲ್ಲಿರುವ ಚಿನ್ನಾಭರಣಗಳನ್ನು ಪೂಜೆಗೆಂದು ಇರಿಸಿ ಅಲ್ಲಿಂದ ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದನ್ನು ಪೊಲೀಸರ ಕಲಿಕೆಯಿಂದ ತಿಳಿದು ಬಂದಿರುತ್ತದೆ.
ಈ ಆರೋಪಿ ಬಂಧನದಿAದ ಉಳಿಮಾವು ಪೊಲೀಸ್ ಠಾಣೆಯ ಎರಡು ಪ್ರಕರಣ ಭದ್ರಾವತಿ ಪೊಲೀಸ್ ಠಾಣೆ ಒಂದು ಪ್ರಕರಣ ಬಳ್ಳಾರಿ ಪೊಲೀಸ್ ಠಾಣೆಯ ಒಂದು ಕಳವು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕಾರಗಳು ಪತ್ತೆ ಆಗಿರುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.