ಬೆಂಗಳೂರು: ಇಂದು ನಡೆಯುವ ಚುನಾವಣೆ ದೇಶದ ಭವಿಷ್ಯ ನಿರ್ಧಾರ ಮಾಡುತ್ತೆ ಎಂದು ಮಾಜಿ ಸಚಿವ ಹಾಗೂ ಶಾಸಕ ಗೋಪಾಲಯ್ಯ ಹೇಳಿದ್ದಾರೆ.
ಇಂದು ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಗೆ ಅವರಿಗೆ ಮತ್ತೊಂದು ಅವಕಾಶ ಕೊಡಬೇಕು.
ಇಡೀ ದೇಶವೇ ಅವರನ್ನ ಬೆಂಬಲಿಸುತ್ತದೆ. ಮತ ಹಾಕೊದು ನಮ್ಮ ಕರ್ತವ್ಯ ಹಕ್ಕು. ಬೆಳಗ್ಗೆಯಿಂದ ಸಂಜೆಯವರಿಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ಹೊಸ ಮತದಾರರು ಈ ದೇಶದ ಭವಿಷ್ಯ ನಿರ್ಧಾರ ಮಾಡುತ್ತಾರೆ. ಕಡ್ಡಾಯವಾಗಿ ಎಲ್ಲರು ಮತದಾನ ಮಾಡಿ, ದೇಶದ ಭವಿಷ್ಯ ಮೋದಿಯವರ ಕೈಯಲ್ಲಿದೆ ಎಂದಿದ್ದಾರೆ.