ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ೨೦ ಪಂದ್ಯ ಮಳೆಗೆ ಆಹುತಿಯಾದರೂ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್  ಯಾದವ್ ಅವರು ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ ೧೫೦ ಸಿಕ್ಸರ್ ಗಳನ್ನು ಸಿಡಿಸಿರುವ ಗೌರವ ಇದೀಗ ಅವರ ಪಾಲಾಗಿದೆ. ಫಾರ್ಮ್
ಸಮಸ್ಯೆಯಿಂದ ಬಳಲುತ್ತಿದ್ದ ಅವರು ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಫಾರ್ಮ್ ಗೆ ಮರಳಿಸಿರುವುದು ಸಮಾಧಾನದ ಸಂಗತಿಯಾಗಿದೆ.
ಮನಕಾ ಓವಲ್ ನಲ್ಲಿ ಬುಧವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ೨೦ ಪಂದ್ಯ ಮಳೆ ಅಡಚಣೆಯಿಂದಾಗಿ ರದ್ದಾಯಿತು. ಭಾರತ
ತಂಡ ಪ್ಲೇಯಿಂಗ್ ಇಲೆವೆನ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿತ್ತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡದ ಪರವಾಗಿ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಉತ್ತಮ ಆರಂಭ ಒದಗಿಸಿದ್ದರು. ೧೪ ಎಸೆತಗಳನ್ನು ಎದುರಿಸಿ ೪ ಬೌಂಡರಿಗಳಿದ್ದ ೧೯ ರನ್ ಗಳಿಸಿದ್ದ ಅವರನ್ನು ಮಧ್ಯಮ ವೇಗಿ ನೇಥನ್ ಎಲ್ಲಿಸ್ ಅವರು ಪೆವಿಲಿಯನ್ ಗೆ ಅಟ್ಟುವಲ್ಲಿ ಯಶಸ್ವಿಯಾದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಅಭಿಷೇಕ್ ಶರ್ಮಾ ಅವರು
ನೀಡಿದ ಕ್ಯಾಚನ್ನು ಮಿಡ್ ಆಫ್ ನಲ್ಲಿದ್ದ ಟಿಂ ಡೇವಿಡ್ ಅವರು ಕ್ಯಾಚ್ ಹಿಡಿಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.
ಮಿಸ್ಟರ್ ೩೬೦ ಸಿಕ್ಸರ್ ಗಳ ಹೊಸ ದಾಖಲೆ ಆಸ್ಟ್ರೇ ಲಿಯಾ ವಿರುದ್ಧ ೨ ಭರ್ಜರಿಸಿಕ್ಸರ್ ಗಳನ್ನು ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಅವರು ಅಂತಾರಾ ಷ್ಟ್ರೀಯ ಟಿ೨೦ ಕ್ರಿಕೆಟ್ ನಲ್ಲಿ ೧೫೦ ಸಿಕ್ಸರ್ ಗಳ ಗಡಿ ದಾಟಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು ೮೬ ಇನ್ನಿಂಗ್ಸ್ ಗಳು ಮಾತ್ರ. ಹೀಗಾಗಿ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ನಲ್ಲಿ ಅವರು ಅತಿ ವೇಗವಾಗಿ ಈ ಗಡಿ ತಲುಪಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೇವಲ೧,೬೪೯ ಎಸೆತಗಳನ್ನು ಎದುರಿಸಿ ಈ ಸಾಧನೆ ಮಾಡಿದ್ದಾರೆ. ಯುಎಇಯ ಮುಹಮ್ಮದ್  ವಾಸೀಮ್ ಅವರು ೬೬ ಇನ್ನಿಂಗ್ಸ್ಗಳಲ್ಲಿ ೧,೫೪೩ ಎಸೆತಗಳನ್ನು ಎದುರಿಸಿ ೧೫೦ ಸಿಕ್ಸರ್ಗಳನ್ನು
ಬಾರಿಸಿದ್ದಾರೆ. ಆದರೆ ವಾಸೀಮ್ ಅವರು ಐಸಿಸಿ (ICC) ಯ ಸಹಯೋಗಿ ರಾಷ್ಟ್ರೀದ ಆಟಗಾರರಾಗಿದ್ದಾರೆ. ಟೆಸ್ಟ್ ಮಾನ್ಯತೆ ಇರುವ ದೇಶಗಳನ್ನು ತೆಗೆದುಕೊಂಡರೆ ಸೂರ್ಯ ಕುಮಾರ್ ಯಾದವ್ ಅವರ ಸಾಧನೆಗೆ ವಿಶೇಷ ಮಹತ್ವವಿದೆ. ೧೫೦ ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಟಿ೨೦ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅವರು ೨೦೫ ಸಿಕ್ಸರ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನಗಳಲ್ಲಿ ವಾಸೀಮ್ (೧೮೭), ಮಾರ್ಟಿನ್ ಗಪ್ಟಿಲ್ (೧೭೩), ಜೋಸ್ ಬಟ್ಲರ್ (೧೭೨) ಮತ್ತು ಈಗ ಸೂರ್ಯಕುಮಾರ್ ಯಾದವ್ (೧೫೦)
ಇದ್ದಾರೆ.


 
		 
		 
		
 
		
 
    