2024ರ ಲೋಕಸಭಾ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದಲ್ಲಿ ಈ ಬಾರಿಕಮಾಲ್ ಮಾಡಬೇಕೆಂದು ಮತ್ತೊಮ್ಮೆ ಜೋಡೆತ್ತುಗಳ ಆಗಮನವಾಗಿದೆ. ಅಚ್ಚರಿ ಅನ್ನಿಸಿದ್ರೂಇದು ನಿಜ. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೋಡೆತ್ತುಗಳು ಎಂದು ಡಿ.ಕೆ.ಶಿವಕುಮಾರ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕರೆಯಲಾಗುತ್ತಿತ್ತು.
ಇದರ ಜೊತೆಗೆ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಜೊತೆಗೆ ನಟರಾದ ದರ್ಶನ್ ತೂಗುದೀಪ ಮತ್ತು ಯಶ್ ನಿಂತಿದ್ದು, ಅವರನ್ನು ಕೂಡ ಜೋಡೆತ್ತುಗಳು ಎಂದು ಕರೆಯಲಾಗುತ್ತಿತ್ತು. ಆದ್ರೆ ಅದೆಲ್ಲಾ ಈಗ ಇತಿಹಾಸ.ಈಗ ಅದೇ ಹಳೆಯ ಮೈಸೂರು ಭಾಗದಲ್ಲಿ ಮತ್ತೊಮ್ಮೆ ಕಮಾಲ್ ಮಾಡಲು ಜೋಡೆತ್ತುಗಳ ಆಗಮನವಾಗಿದ್ದು, ಇದು ಹೊಸದು ಎಂದು ರಾಜಕೀಯ ವಲಯದಲ್ಲಿ ಚರ್ವೆಯಾಗಲಾರಂಭಿಸಿದೆ.
ಹಾಗಾದ್ರೆ, ಯಾವುದು ಆ ಜೋಡೆತ್ತುಗಳು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.ಕಾಂಗ್ರೆಸ್ ಪಾಲಿಗೆ ಸಿದ್ದು- ಡಿಕೆಶಿಯೇ ಹೊಸ ಜೋಡೆತ್ತುಗಳು!
ರಾಜ್ಯದಲ್ಲಿ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರೆಂಟಿಗಳ ಮೇಲೆ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಗೆ ಇದೀಗ ಹೊಸ ಜೋಡೆತ್ತುಗಳ ಆಗಮನ ಆಗಿದೆ. ಸರ್ಕಾರ ರಚನೆಯಾಗಿ 10 ತಿಂಗಳಿಗೆ ಆ ಜೋಡೆತ್ತುಗಳ ನಡುವೆ ಎಷ್ಟೇ ವೈಮನಸ್ಯವಿದ್ದರೂ ಸರಿ, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಖಾಡಕ್ಕೆ ಎಂಟ್ರಿ ಕೊಟ್ಟಿದೆ ಆ ಜೋಡೆತ್ತುಗಳು.
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರು ಕೂಡ ಹಳೆಯ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದು, ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ ಕ್ಷೇತ್ರಗಳ ಕಬ್ಜ ಮಾಡಿಕೊಳ್ಳಲು ತಂತ್ರಗಳ ಮೇಲೆ ತಂತ್ರ ಹೆಣೆಯುತ್ತಿದ್ದಾರೆ.
ಈಗಾಗಲೇ ಸಿಎಂ ಸಿದ್ಧರಾಮಯ್ಯ ಕಳೆದ ವಾರ ಮೂರು ದಿನಗಳ ಕಾಲ, ಈ ವಾರ ಮತ್ತೆ ಮೂರು ದಿನಗಳ ಕಾಲ ಸಿಎಂ ಸಿದ್ಧರಾಮಯ್ಯ ಮೈಸೂರು, ಚಾಮರಾಜನಗರ, ಮಂಡ್ಯ ಭಾಗದಲ್ಲಿ ಪ್ರಯಾಣ ಬೆಳೆಸಿದ್ದು, ಸಂಘಟನೆಗೆ ಒತ್ತು ಕೊಟ್ಟಿದ್ದಾರೆ.ಇತ್ತ ಸಿಎಂ ವಾಪಸ್ ಆಗುತ್ತಿದ್ದಂತೆ ಡಿಸಿಎಂ ಡಿಕೆಶಿ ಸರದಿ. ಅವರೀಗ ಹಳೆಯ ಮೈಸೂರು ಕಡೆ ನಿಗಾವಹಿಸಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಾ? ಅಥವಾ ಮೈತ್ರಿಗೆ ಎದುರು ಗೆಲುವಾ? ಎಂಬುದಕ್ಕೆ ಜೂನ್ 4 ರಂದು ಉತ್ತರ ಸಿಗಲಿದೆ.