ಬೆಂಗಳೂರು: ಲಾರ್ಡ್ಸ್ ಮಾರ್ಕ್ ಇಂಡಸ್ಟ್ರೀಸ್ ಲಿಮಿಟೆಡ್, ಒಂದು ವೈವಿಧ್ಯಮಯ ಆರೋಗ್ಯ ಹಾಗೂ ತಂತ್ರಜ್ಞಾನ ಆಧಾರಿತ ಗುಂಪು, ಬೆಂಗಳೂರು ಮೂಲದ ಮೆಡ್-ಟೆಕ್ ಇನೊವೆಟರ್ ರೆನಾಲಿಕ್ಸ್ ಹೆಲ್ತ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನ ೮೫% ಹಂಚಿಕೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ರೆನಾಲಿಕ್ಸ್ ಭಾರತದ ಮೊದಲ ಸಂಪೂರ್ಣ ಸ್ವದೇಶಿ, AI ಮತ್ತು ಕ್ಲೌಡ್ ಆಧಾರಿತ ಸ್ಮಾರ್ಟ್ ಹೀಮೊಡಯಾಲಿಸಿಸ್ ಯಂತ್ರವನ್ನು ಅಭಿವೃದ್ಧಿಪಡಿಸಿದ ಸಂಸ್ಥೆಯಾಗಿದೆ. ಇದರೊಂದಿಗೆ, ರೆನಾಲಿಕ್ಸ್ ಈಗ ಲಾರ್ಡ್ಸ್ ಮಾರ್ಕ್ ಇಂಡಸ್ಟ್ರೀಸ್ನ R&D ಅಂಗವಾಗಿ ಕೆಲಸ ಮಾಡಲಿದ್ದು, ಕಿಡ್ನಿ ಹಾಗೂ ಲಿವರ್ ಸಂಬಂಧಿತ ವೈದ್ಯಕೀಯ ಸಾಧನಗಳ ಕ್ಷೇತ್ರದಲ್ಲಿ ಮುಂದಿನ ಸಂಶೋಧನೆಗಳನ್ನು ಮುಂದುವರೆಸಲಿದೆ.
ಸ್ವಾಧೀನ ಕುರಿತು ಮಾತನಾಡಿದ ಲಾರ್ಡ್ಸ್ ಮಾರ್ಕ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ ಉಪಾಧ್ಯಾಯ ಅವರು, ರೆನಾಲಿಕ್ಸ್ನಲ್ಲಿ ನಮ್ಮ ಹೂಡಿಕೆ ಭಾರತದ ಆರೋಗ್ಯ ಸೇವೆಗಳ ಭವಿಷ್ಯದತ್ತ ತೆಗೆದುಕೊಂಡಿರುವ ದೃಷ್ಟಿಸಂಪನ್ನ ಹೆಜ್ಜೆ – ಅಗ್ರಗಣ್ಯ ಮೆಡ್-ಟೆಕ್ ಭಾರತದಲ್ಲೇ ವಿನ್ಯಾಸಗೊಳಿಸಿ, ಎಂಜಿನಿಯರ್ ಮಾಡಿ, ತಯಾರಿಸಲಾಗುತ್ತದೆ; ಭಾರತಕ್ಕೂ ಜಗತ್ತಿಗೂ. ಡಯಾಲಿಸಿಸ್ ಅನ್ನು ದುಬಾರಿ ಹಾಗೂ ಭಾರಿ ಮೂಲಸೌಕರ್ಯ ಅವಲಂಬಿತ ಸೇವೆಯಿಂದ ಸ್ಮಾರ್ಟ್, ಸಂಪರ್ಕಿತ ಮತ್ತು ರೋಗಿ-ಕೇಂದ್ರೀಕೃತ ಅನುಭವಕ್ಕೆ ಪರಿವರ್ತಿಸುವ ಅಗತ್ಯವಿದೆ ಎಂದರು.
“ಡಯಾಲಿಸಿಸ್ನ ಭವಿಷ್ಯಕ್ಕೆ ಹೊಸ ದಿಕ್ಕು”



