ದೇವನಹಳ್ಳಿ: ಗ್ರಾಮೀಣ ಭಾಗದ ಸಣ್ಣ ಅತೀಸಣ್ಣ ಉದ್ಯೋಗಸ್ಥರಿಗೆ ಆರ್ಥಿಕವಾಗಿ ಸಹಾಯಮಾಡುವ ಉದ್ದೇಶದೂಂದಿಗೆ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯನ್ನು ಜಾರಿಗೆ ತಂದು 5 ಲಕ್ಷದಿಂದ 50 ಲಕ್ಷದವರೆಗೂ ಸಾಲವನ್ನು ನೀಡಲಾಗುವುದು ಇದನ್ನು ಸದುಪಯೋಗಿಸಿಕೊಂಡು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಿ ಎಂದು ಕೆನರಾ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್ ಮುಖ್ಯಸ್ಥ ಮಧುಕರ್ ಹೇಳಿದರು.
ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಸ್ಥಾಪಿಸುವ ಉದ್ದೇಶದಿಂದ 2023-24ನೇ ಸಾಲಿನ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯ (ಪಿ.ಎಂ.ಇ.ಜಿ.ಪಿ)ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉಪಮುಖ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್ ಉದ್ಘಾಟಿಸಿದರು.
ಖಾದಿ ಮಂಡಳಿಯ ಪಿ.ಎಂ.ಇ.ಜಿ.ಪಿ ವಿಭಾಗದ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅಡಿಗ ಮಾತನಾಡಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಯುವಕ,ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ, ಕೃಷಿ ,ಹೈನುಗಾರಿಕೆ,ಹೋಟೆಲ್ ಉದ್ಯಮ, ಅಂಗಡಿ ಮುಂಗಟ್ಟುಗಳು ಯಾವುದೇ ನಿರ್ದಿಷ್ಟವಾಗಿ ಯಾವ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಮಾಡಲಿದ್ದೇವೆ ಎಂದು ನಿರ್ಧರಿಸಿ ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಅಡಿಯಲ್ಲಿ ಬರುವಂತಹ ಎಲ್ಲಾ ಯೋಜನೆಗಳ ನಿಯಮಗಳಾನುಸಾರ ಆಸಕ್ತರಿಗೆ ತಿಳಿಸಲಾಯಿತು ಹಾಗೂ ಫಲಾನುಭವಿಗಳ ಕುರಿತು ಮಾಹಿತಿ ನೀಡಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಖಾದಿ ಗ್ರಾಮ ಅಧಿಕಾರಿ ಎನ್ ಗಂಗಾದೇವಿ, ನೋಡಲ್ ಅಧಿಕಾರಿಸಂಪತ್ ಕುಮಾರ್, ಹಾರೋಹಳ್ಳಿಯ ಯೂನಿಯನ್ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ರವಿಕುಮಾರ್,ಕೆನರಾ ಬ್ಯಾಂಕ್ ಆವತಿ ಬ್ರಾಂಚ್ ಮ್ಯಾನೇಜರ್ ವಿನುತಾ ಸೇರಿದಂತೆ ಫಲಾನುಭವಿಗಳು ಗ್ರಾಮಸ್ಥರು ಮತ್ತಿತರರು ಇದ್ದರು.