ಬೆಂಗಳೂರು: ಬಿಡದಿಯ ಬಳಿ ಜೋಗರದೊಡ್ಡಿಯಲ್ಲಿರುವ ಕೆನರಾ ಬ್ಯಾಂಕ್ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯವರು ಒಂದು ದಿನದ ಸಾಂಜೀಕಲೆಯ (paper art) ಕಲಿಕಾ ಶಿಬಿರವನ್ನು ಏರ್ಪಡಿಸಿತ್ತು.
ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ರೀ ಶಿವರಾಮ್ ರವರು, ಆಧುನಿಕ ಜೀವನ ಭರಾಟೆಯಲ್ಲಿ ಅತ್ಯಮೂಲ್ಯ ಕಲೆಯಾದ ಸಾಂಜೀಕಲೆಯು ನಶಿಸಿಹೋಗುತ್ತಿರುವುದು ದು:ಖದ ಸಂಗತಿ.
ಈ ಕಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲಾ ಶಾಲೆಗಳಲ್ಲಿ ಪ್ರತಿವರುಷವೂ ಕನಿಷ್ಟ ಮೂರುದಿನದ ಸಾಂಜೀಕಲೆಯ ಶಿಬಿರವನ್ನು ಏರ್ಪಡಿಸಬೇಕು. ಇದರಿಂದ ಮಕ್ಕಳ ಮನಸ್ಸು ಉಲ್ಲಾಸಗೊಳ್ಳುವುದಲ್ಲದೆ, ಏಕಾಗ್ರತೆಗೂ ಸಹಕಾರಿಯಾಗುವುದು ಎಂದರು.
ಖ್ಯಾತ ಸಾಂಜೀ ಕಲಾವಿದ ಶ್ರೀ ಎಸ್ ಎಫ್ ಹುಸೈನಿಯವರು ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿಯವರಿಗೆ ಸಾಂಜೀಕಲೆಯ ಬಗ್ಗೆ ಮಾಹಿತಿಯನ್ನು ನೀಡುವುದಲ್ಲದೆ, ಸಾಂಜೀಕಲೆಯನ್ನು ಕಲಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರಾದ ಚಂದ್ರಶೇಖರ್, ಸಿದ್ದಪ್ಪ, ನರೇಶ್ ಕುಮಾರ್ ಮತ್ತು ಶಿವಕುಮಾರ್ ರವರು ಉಪಸ್ಥಿತರಿದ್ದರು.