ಬೆಂಗಳೂರು : ರಸ್ತೆ ದಾಟುತ್ತಿದ್ದಾಗ ಮೋಟರ್ ಬೈಕ್ ಸವಾರ ಅತಿ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಯ್ಯ ರಸ್ತೆಯಲ್ಲಿರುವ ಫ್ಯಾಮಿಲಿ ಕೋರ್ಟ್ ಮುಂಭಾಗ ನಡೆದಿದೆ.
ತಡ ರಾತ್ರಿ ಎಂಟರ ಸುಮಾರಿಗೆ ಅನ್ಸರ್ಪಾಷಾ(48) ಕಾರ್ ಮೆಕ್ಯಾನಿಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಸಮಯದಲ್ಲಿ ಅಪಘಾತಕ್ಕೆ ಮೃತಪಟ್ಟಿರುತ್ತಾನೆ ಎಂದು ವಿಲ್ಸನ್ ಗಾರ್ಡನ್ ಸಂಚಾರಿ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದ್ವಿಚಕ್ರ ವಾಹನ ಸವಾರನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.



