ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಜಿಲ್ಲೆಯ ವಿವಿಧೆಡೆ, ಮತದಾರರಿಗೆ ಹಂಚಿಕೆ ಮಾಡಿರುವ ತಮ್ಮ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಗಿಫ್ಟ್ ಕಾರ್ಡ್ ಮಧ್ಯೆ ದೇವರ ಫೋಟೊಗಳಿವೆ. ಮತದಾನಕ್ಕೆ ಹಿಂದಿನ ದಿನವಾದ ಗುರುವಾರ (ಏಪ್ರಿಲ್ 25) ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ವಿವಿಧೆಡೆ ಹಂಚಿಕೆ ಮಾಡಿರುವ ಕಾರ್ಡ್ಗಳ ಮಧ್ಯೆ ದೇವರುಗಳ ಚಿತ್ರ ಪತ್ತೆಯಾಗಿದೆ.
ಚನ್ನಪಟ್ಟಣ ಭಾಗದಲ್ಲಿ ವಿತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿರುವ ಕೆಲ ಕಾರ್ಡ್ಗಳನ್ನು ಎರಡು ಹೋಳು ಮಾಡಿದಾಗ, ಒಂದು ಕಡೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರ ಭಾವಚಿತ್ರದೊಂದಿಗೆ ಕೆಂಗಲ್ ಹನುಮಂತಯ್ಯ ಸ್ವಾಮಿ ದೇವರ ಚಿತ್ರವಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಮುಖಂಡರಾದ ಕುಸುಮಾ ಅವರ ಭಾವಚಿತ್ರದೊಂದಿಗೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಚಿತ್ರವಿದೆ.
ಕ್ಯೂ ಆರ್ ಕೋಡ್ ಮತ್ತು ಕ್ರಮ ಸಂಖ್ಯೆ ಹೊಂದಿರುವ ಕಾರ್ಡ್ನ ಒಂದು ಕಡೆ, ರಾಜ್ಯದ ಗ್ಯಾರಂಟಿ ಯೋಜನೆಗಳು ಹಾಗೂ ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಭರವಸೆಗಳ ಘೋಷಣೆಗಳಿವೆ ಎಂದು ಕಾರ್ಡ್ ಪಡೆದಿರುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಿಳಿಸಿದರು.