ಬೆಂಗಳೂರು: ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸಿನ ದೊಡ್ಡಿ ಗ್ರಾಮದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಆಕಾಶ್ ಎಂಬ ವ್ಯಕ್ತಿಯು 5 ರಿಂದ 6 ಬಾರಿ ದೈಹಿಕ ಸಂಪರ್ಕ ಹೊಂದಿದ ನಂತರ ಮನಸ್ತಾಪಗಳಾಗಿ ಆಕೆಯನ್ನು ನಿರ್ಲಕ್ಷಿಸಿದ ಮೇರೆಗೆ ಸಂತ್ರಸ್ತೆ ಅತ್ತಿಬೆಲೆ ಪೊಲೀಸ್ ಠಾಣೆಗೆ ಅತ್ಯಚಾರ ನಡೆದ ಬಗ್ಗೆ ದೂರನ್ನು ದಾಖಲಾಗಿ ದಾಖಲು ಮಾಡಿರುತ್ತಾರೆ.
ಅತ್ತಿಬೆಲೆ ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿರುತ್ತಾರೆ.ಮತ್ತೊಂದು ಪೋಕ್ಸೋ ಪ್ರಕರಣ ನಂದಗುಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಿನ್ನೆ ವರದಿಯಾಗಿದೆ.ಗ್ಲೋಬಲ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಮುರಳಿ ಎಂಬಾತ ಲೈಂಗಿಕ ಸಂಪರ್ಕ ನಡೆಸಿರುವ ಬಗ್ಗೆ ವರದಿಯಾಗಿದ್ದು ಆತನನ್ನು ನಂದಗುಡಿ ಪೊಲೀಸರು ಬಂಧಿಸಿರುತ್ತಾರೆ.