*ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ
ದೊಡ್ಡಬಳ್ಳಾಪುರ: ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ಭಾನುವಾರ ನಗರದಲ್ಲಿ ಶೋಭಾ ಯಾತ್ರೆ ಅದ್ದೂರಿಯಾಗಿ ನೆರವೇರಿತು. ಹೆಲಿಕಾಪ್ಟರ್ ಮೂಲಕ ಶೋಭಾಯಾತ್ರೆಯಲ್ಲಿ ನೆರೆದಿದ್ದ ಭಕ್ತರ ಮೇಲೆ ಪುಷ್ಪಾರ್ಚನೆ ಮಾಡಲಾಯಿತು.
ಪ್ರತಿ ವರ್ಷದಂತೆಯೇ ಈ ಬಾರಿಯೂ ಡಿ.ಜೆಗೆ ಅನುಮತಿ ನೀಡದೆ ಧ್ವನಿವ ರ್ಧಕಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿತು. ಅದರಂತೆಯೇ ಮಧ್ಯಾಹ್ನ 3 ಗಂಟೆಗೆ ಭಗತ್ಸಿಂಗ್ ಕ್ರೀಡಾಂಗಣದಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಶ್ರೀರಾಮ, ಶಿವ, ಆಂಜನೇಯ, ಇಮ್ಮಡಿ ಪುಲಿಕೇಶಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ವಿವಿಧ ದೇವತೆಗಳ ಪ್ರತಿಮೆಗಳು ಮೆರವಣಿಗೆ ನಡೆಲಾಯಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಸಂಜೆ 5 ಗಂಟೆ ಸುಮಾರಿಗೆ ನಗರದ ಹಳೇ ಬಸ್ ನಿಲ್ದಾಣಕ್ಕೆ ಶೋಭಾಯಾತ್ರೆ ಆಗಮಿಸಿದಾಗ ಇದೇ ಪ್ರಥಮ ಬಾರಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ಜೈ ಶ್ರೀರಾಮ ಘೋಷಣೆಗಳನ್ನು ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಶೋಭಾಯಾತ್ರೆ ಸಾಗುವ ರಸ್ತೆಯುದ್ದಕ್ಕೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಶ್ರೀರಾಮನ ಚಿತ್ರವುಳ್ಳ ಕೇಸರಿ ಧ್ವಜ ಹಿಡಿದು ಜೈ ಶ್ರೀ ರಾಮ್ ಉದ್ಘೋಷದೊಂದಿಗೆ ಹಿಂದೂ ಕಾರ್ಯ ಕರ್ತರು ಭಕ್ತಿ ಭಾವ, ರಾಷ್ಟçಭಕ್ತಿ ಮೆರೆದರು. ಶೋಭಾ ಯಾತ್ರೆಯಲ್ಲಿ ಸಾವಿರಾರು ಯುವಕರು ಶ್ರೀ ರಾಮನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಚಿತ್ರದುರ್ಗದ ಹಿಂದೂ ಧಾರ್ಮಿಕ ಮುಖಂಡ ಪ್ರಭಂಜನ್ ಅವರಿಂದ ದಿಕ್ಕೂಚಿ ಭಾಷಣ ಮಾಡಿ, ಹಿಂದೂ ಉತ್ಸವಗಳಲ್ಲಿ ಡಿಜೆ ನಿಷೇಧ ಎಂದು ಹೇಳುವ ಜಿಲ್ಲಾಡಳಿತಕ್ಕೆ, ಗೋಹತ್ಯೆ ನಿಷೇಧ ಕಾನೂನಿಗೆ ಅದು ನಿಮಗೆ ಕಾಣದೇ ಇರುವುದು ದುರಂತ. ಹಿಂದೂ ಸಂಘಟನೆಗಳಿಗೆ ಕಾನೂನು ಪಾಲನೆಗೆ ಮೊದಲ ಆದ್ಯತೆ, ಆದರೆ ಕಾನೂನು ಪಾಲಕರು ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಬೇಕು. ರಾಮನ ಸಂದೇಶವೇ ಕಾನೂನು ಪಾಲನೆ ಎಂಬ ಪ್ರಜ್ಞೆ ನಮ್ಮೆಲ್ಲರಿಗೂ ಇದೆ ಎಂದು ಹೇಳಿದರು.
ಕ್ಷೇತ್ರೀಯ ಬಜರಂಗ ದಳ ಸಂಯೋಜಕ ಕುಮಾರ ಸ್ವಾಮಿಮಾತನಾಡಿ, ಹಿಂದುತ್ವದ ಚಿಂತನೆಗಳ ಮೂಲಕ ಸಮಾಜ ಒಗ್ಗೂಡಬೇಕು. ಹಿಂದುತ್ವದ ಧೀಶಕ್ತಿ ಎಲ್ಲರಿಗೂ ಅರ್ಥವಾಗುವಂತೆ ಮಾಡಬೇಕು. ರಾಷ್ಟ್ರೀಯ ಯ ಭಾವನೆಯನ್ನು ಪ್ರಚೋದಿಸಿ ಉತ್ತಮ ಭವಿಷ್ಯ ವನ್ನು ಸಾಕಾರಗೊಳಿಸುವುದು ಅತ್ಯಗತ್ಯ ಎಂದರು.
ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಮುಂದಿನ ವರ್ಷಗಳಲ್ಲಿ ಶ್ರೀರಾಮನವಮಿ ಉತ್ಸವ ವನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲಾಗುವುದು. ದೊಡ್ಡಬಳ್ಳಾಪುರದ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೀರಾಮ ಪ್ರಭುವಿನ ಮೇಲೆ ಹೆಲಿಕ್ಯಾಪ್ಟರ್ನಿಂದ ಪುಷ್ಪವೃಷ್ಟಿಮಾಡಲಾಗಿದೆ. ಕಾರ್ಯಕರ್ತರ ಉತ್ಸಾಹ ಶ್ಲಾಘನೀಯ ಎಂದರು.
ಶೋಭಾಯಾತ್ರೆ ಬಳಿಕಭಗತ್ಸಿಂಗ್ ಕ್ರೀಡಾಂಗಣ ದಲ್ಲಿ ಲೇಸರ್ಪ್ರದರ್ಶನ, ಬೃಹತ್ ರಾವಣ ಪ್ರತಿಕೃತಿ ದಹನ, ಆಕರ್ಷಕ ಸಿಡಿ ಮದ್ದು ಪ್ರದರ್ಶನ ಕಾರ್ಯ ಕ್ರಮನಡೆಯಿತು. 3 ದಿನಗಳಿಂದ ನಡೆದ ಶ್ರೀರಾಮೋತ್ಸವದೊಂದಿಗೆ ಮುಕ್ತಾಯಗೊಂಡಿತು.
ಶ್ರೀರಾಮ ಶೋಭಾಯಾತ್ರೆ ತಾಲೂಕು ಕಚೇರಿ ರಸ್ತೆ, ವಿಠೋಬಾ ರಸ್ತೆ, ಸೌಂದರ್ಯ ಮಹಲ್ ವೃತ್ತ, ಬನ್ನಿಲ್ದಾಣ, ಕೋಟೆ ರಸ್ತೆ, ಚೌಡೇಶ್ವರಿ ಗುಡಿ ಬೀದಿ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಮುಕ್ತಾಂಬಿಕಾ ರಸ್ತೆ, ಕುಚ್ಚಪ್ಪನಪೇಟೆ, ಅ.ನ.ಕೃ ರಸ್ತೆ, ಇಸ್ಲಾಂಪುರ, ಮುಗು ವಾಳಪ್ಪ ವೃತ್ತ, ತಾಲೂಕು ಕಚೇರಿ ವೃತ್ತದ ಮೂಲಕ ಭಗತ್ಸಿಂಗ್ ಕ್ರೀಡಾಂಗಣ ತಲುಪಿತು.
ದೊಡ್ಡಬಳ್ಳಾಪುರದಲ್ಲಿ ಭಾನುವಾರ ನಡೆದ ಶೋಭಾಯಾತ್ರೆ



