ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಕಮಲ ಪಕ್ಷಕ್ಕೆ ಆಗಮಿಸುತ್ತಿದ್ದಂತೆ ಸದ್ದಿಲ್ಲದೆ ಆಪರೇಷನ್ ಶುರು ಮಾಡಿದ್ದಾರೆ. 2024ರ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ, ತಮ್ಮ ಕೆಆರ್ಪಿಪಿ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸಿ, ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದಿದ್ದಾರೆ.
ಬಿಜೆಪಿಗೆ ಆಗಮಿಸುತ್ತಿದ್ದಂತೆ ಗಾಲಿ ಜನಾರ್ದನ ರೆಡ್ಡಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಸದ್ದಿಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಪರೇಷನ್ ಕಮಲ ಶುರು ಮಾಡಿದ ಗಾಲಿ ಜನಾರ್ದನ ರೆಡ್ಡಿ, ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡರನ್ನು ಪಕ್ಷಕ್ಕೆ ಕರೆ ತಂದಿದ್ದಾರೆ. ಕಳೆದ ವಾರವಷ್ಟೇ ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ರೆಡ್ಡಿ, ಬಿಜೆಪಿಗೆ ಆಗಮಿಸುತ್ತಿದ್ದಂತೆ ಈ ಮೂಲಕ ಆಪರೇಷನ್ ಕಮಲ ಶುರು ಮಾಡಿದ್ದಾರೆ.
ಲೋಕಸಭಾ ಕ್ಷೇತ್ರದ ಚುನಾವಣೆಯ ಹೊಸ್ತಿಲಿನಲ್ಲಿ ವಿವಿಧ ಪಕ್ಷದ ನಾಯಕರಿಗೆ ಗಾಳ ಹಾಕುವ ಮೂಲಕ ಆಪರೇಷನ್ ಕಮಲ ಆರಂಭಿಸಿದ ರೆಡ್ಡಿ, ಮೊದಲು ಕೊಪ್ಪಳದ ಮಾಜಿ ಸಂಸದ, ಮುಂದೆ ನೋಡುತ್ತೀರಿ. ಯಾರೆಲ್ಲಾ ಪಕ್ಷಕ್ಕೆ ಬರುತ್ತಾರೆ? ಎಂದು ಆಪ್ತರ ಬಳಿ ಚರ್ಚೆ ಮಾಡಲಾರಂಭಿದ್ದಾರೆ.
ಇತ್ತ ಕಲ್ಯಾಣ ಕರ್ನಾಟಕ ಭಾಗದ 5 ಲೋಕಸಭಾ ಕ್ಷೇತ್ರಗಳ ಮೇಲೆ ಪ್ರಭಾವದೊಂದಿಗೆ ಹಿಡಿತ ಇಟ್ಟುಕೊಂಡಿರುವ ಅವರು, ಕಮಲ ಪಕ್ಷಕ್ಕೆ ಮರಳುತ್ತಿದ್ದಂತೆ ಸೈಲೆಂಟ್ ಆಪರೇಷನ್ ಶುರು ಮಾಡಿದ್ದಾರೆ.