ಎ.ಆರ್.ಸಾಯಿರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿದ್ದು, ವಿನೂತನ ಶೀರ್ಷಿಕೆ ಹೊಂದಿರುವ ಧೈರ್ಯಂ ಸರ್ವತ್ರ ಸಾಧನಂ (ಡಿಎಸ್ಎಸ್) ಚಿತ್ರದ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಎ.ಪಿ. ಪ್ರೊಡಕ್ಷನ್ ಅಡಿಯಲ್ಲಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ.
(1) ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಭೋವಿ ಗುರುಪೀಠ (2) ಶ್ರೀಶ್ರೀಶ್ರೀ ಹನುಮಂತನಾಥ ಸ್ವಾಮೀಜಿಗಳು, ಕುಂಚಿಟಿಗರ ಮಠ, ಎಲೆರಾಂಪುರ, ತುಮಕೂರು. (3) ಶ್ರೀಶ್ರೀಶ್ರೀ ರೇಣುಕಾನಂದ ಸ್ವಾಮೀಜಿ, (4) ಶ್ರೀ ಆರ್ಯ ಈಡಿಗ ಇವರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಇದಕ್ಕೂ ಮುನ್ನ ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ ಟ್ರೇಲರ್ ಲೋಕಾರ್ಪಣೆಗೊಳಿಸಿ ಅಭಿನಂದಿಸಿದ ತುಣುಕುಗಳು ಪರದೆ ಮೇಲೆ ಬಿತ್ತರಗೊಂಡಿತು.
ನಂತರ ಸಿನಿಮಾ ಹುಟ್ಟಿಕೊಂಡ ಬಗೆಯನ್ನು ಅಣುಕು ಪ್ರದರ್ಶನದ ಮೂಲಕ ಕಲಾವಿದರು, ತಂತ್ರಜ್ಘರು ತೋರಿಸಿದ್ದು ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಬಿಡಿ ಭಾಗಗಳು ಕೂಡಿಕೊಂಡು ಗನ್ ಆಗಿದೆ. ಒಬ್ಬೋಬ್ಬರೇ ಸೇರಿಕೊಂಡು ಚಿತ್ರ ಸಿದ್ದಗೊಂಡಿದೆ. ವಿಶೇಷವೆಂದರೆ ಇದೊಂದು ಸತ್ಯ ಘಟನೆಯ ಅಂಶಗಳನ್ನು ಒಳಗೊಂಡಿದೆ. ಯಾರ ಕಥೆ. ಎಲ್ಲಿ ಆಗಿದ್ದು ಎಂಬುದನ್ನು ಕೊನೆಯಲ್ಲಿ ಆ ವ್ಯಕ್ತಿಗಳ ಭಾವಚಿತ್ರ ಹಾಗೂ ಪೂರ್ಣ ವಿವರವು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
ಈಗಾಗಲೇ ಅವರುಗಳ ಬಳಿ ಅನುಮತಿ ಪಡೆಯಲಾಗಿದೆ. ಘಟನೆ ನಡೆದಂತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಿರ್ದೇಶಕ ಹಾಗೂ ನಾಯಕನ ಅಮ್ಮನಿಗೆ ಭರವಸೆ ನೀಡಿದಂತೆ ನಿರ್ಮಾಣ ಮಾಡಿರುವುದಾಗಿ ಆನಂದ್ಬಾಬು ಹೇಳಿಕೊಂಡರು. ನಾಯಕನಾಗಿ ವಿವಾನ್.ಕೆ.ಕೆ. ನಾಯಕಿಯಾಗಿ ಅನುಷಾರೈ. ವಿಶಿಷ್ಟ ಪಾತ್ರಗಳಲ್ಲಿ ಯಶ್ಶೆಟ್ಟಿ, ಬಲರಾಜವಾಡಿ, ಚಕ್ರವರ್ತಿಚಂದ್ರಚೂಡ್, ವರ್ಧನ್, ಪ್ರದೀಪ್ಪೂಜಾರಿ ರಾಮ್ಪವನ್. ಉಳಿದಂತೆ ಮೀನಾ, ಪದ್ಮಿನಿಶೆಟ್ಟಿ, ಅರ್ಜುನ್ಪಾಳೆಗಾರ, ರಾಮ್ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.