ಬೆಂಗಳೂರು : ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಟ್ಟಂಗೂರು ಸಮೀಪ ನವೀನ್(೨೫) ಎಂಬ ಯುವಕ ಅತಿ ವೇಗವಾಗಿ ದ್ವಿಚಕ್ರವಾಹನ ಚಲಾಯಿಸಿ, ಹಳ್ಳಕ್ಕೆ ಬಿದ್ದು ತೀವ್ರತರವಾದ ಗಾಯ ಸಂಭವಿಸಿ ಮೃತಪಟ್ಟಿರುತ್ತಾನೆ.
ಮತ್ತೊಂದು ಅಪಘಾತ ಪ್ರಕರಣ ವಿಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ರಸ್ತೆಯಲ್ಲಿರುವ ಹೆರಿಗೆನಹಳ್ಳಿ ಗೇಟ್ ಬಳಿ ಅಪರಿಚಿತ ವಾಹನ ಮೋಟಾರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಶಿವರಾಜಪ್ಪ (೩೮) ಎಂಬ ವ್ಯಕ್ತಿ ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟಿçÃಯ ಹೆದ್ದಾರಿ ೪೮ ರಾಯರಪಾಳ್ಯದ ಬಳಿ ಲಾರಿ ಮೋಟಾರ್ ಬೈಕ್ ಸವಾರಣಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಹನ್ ಕುಮಾರ್(೫೫) ಎಂಬ ವ್ಯಕ್ತಿ ಮೃತಪಟರೆ ಹಿಂಬದಿ ಸವಾರ ತೀವ್ರತರವಾದ ಗಾಯಕೊಂಡು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.