ಬೆಂಗಳೂರು: ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿರುತ್ತಾರೆ.
ಇಂದು ಬೆಳಿಗ್ಗೆ ಕಾರು ಮತ್ತು ದ್ವಿಚಕ್ರ ವಾಹನಗಳು ನೆಲಮಂಗಲದ ಸರ್ವಿಸ್ ರಸ್ತೆಯಲ್ಲಿರುವ ಭರತ ಟೈಲ್ಸ್ ಅಂಗಡಿ ಮುಂಭಾಗ ಪರಸ್ಪರ ಡಿಕ್ಕಿಯಾಗಿ ಶರಣಬಸಪ್ಪ (35) ವ್ಯಕ್ತಿ ಮೃತಪಟ್ಟಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ನಿನ್ನೆ ಸಂಜೆ 4:30 ಗಂಟೆಗೆ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರವಿಕುಮಾರ್ (45)ಆರ್ಟಿಓ ಏಜೆಂಟ್ ಮೃತಪಟ್ಟಿರುತ್ತಾರೆ. ಈ ಪ್ರಕರಣ ಬೆಂಗಳೂರು ತುಮಕೂರು ರಸ್ತೆಯ ಮಾದಾವರ ಬಳಿ ಘಟನೆ ಸಂಭವಿಸಿರುತ್ತದೆ.
ಎರಡು ಪ್ರಕರಣಗಳನ್ನು ನೆಲಮಂಗಲ ಸಂಚಾರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೋಲ್ ಸರ್ವಿಸ್ ರಸ್ತೆಯ ಬಳಿ ಕ್ಯಾಂಟರ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿರುತ್ತಾನೆ. ಚನ್ನಕೇಶವ(46), ರಸ್ತೆ ದಾಟುವ ಸಮಯದಲ್ಲಿ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.