ಬೆಂಗಳೂರು: ಬೆಂಗಳೂರು ಮತ್ತು ವಿವಿಧೆಡೆ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.ಟೀ ಕುಡಿದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಮಯದಲ್ಲಿ ಹಿಂಬದಿ ಸವಾರ ನಿದ್ರೆಗೆ ಜಾರಿ ಬೀಳುವ ಸಮಯದಲ್ಲಿ ಎಚ್ಚರಿಕೆಯಾಗಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ಚಾಲಕನ ಜರ್ಕಿನ್ ಎಳೆದ ಪರಿಣಾಮ ಚಾಲಕ ಬಲಗಡೆ ಬಿದ್ದು ಹಿಂಬದಿ ಸವಾರ ಎಡಗಡೆ ಬಿದ್ದಾಗ ಹಿಂದೆಯಿಂದ ಬರುತ್ತಿದ್ದ ಲಾರಿ ಮೇಲೆ ಹರಿದು ಮೃತಪಟ್ಟಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ರಾಬರ್ಟ್ ಕುಮಾರ್ (25) ಎಂಬ ವ್ಯಕ್ತಿಯು ಮೃತನಾಗಿರುತ್ತಾನೆ. ಚಾಲಕನಿಗೆ ತೀವ್ರತರವಾದ ಗಾಯವಾಗಿ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ.ಮತ್ತೊಂದು ಪ್ರಕರಣದಲ್ಲಿ ವಿಜಿಪುರ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯ ವಿಜಯಪುರ ದೇವನಹಳ್ಳಿ ರಸ್ತೆಯ ಏಳಿಯೂರ್ ಗೇಟ್ ಬಳಿ ಅಶೋಕ್ ಲೈಲ್ಯಾಂಡ್ ಲಾರಿ ಮತ್ತು ದ್ವಿಚಕ್ರ ವಾಹನಗಳ ಅಪಘಾತ ಸಂಭವಿಸಿರುತ್ತದೆ.
ಅಂಜಿನಪ್ಪ (53) ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುತ್ತಾನೆ. ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿರುತ್ತದೆ.ಇನ್ನೊಂದು ಪ್ರಕರಣದಲ್ಲಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಗಲ್ ಕೆಂಪೋ ಹಳ್ಳಿ ಬಳಿ ಗಂಗಮ್ಮ 40 ವರ್ಷ ರಸ್ತೆ ದಾಟುವ ಸಮಯದಲ್ಲಿ ನಿನ್ನೆ ಮಧ್ಯಾಹ್ನ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುತ್ತಾರೆ.ಮೃತ ಗಂಗಮ್ಮ ಗೃಹಪ್ರವೇಶಕ್ಕೆ ಹೋಗುವ ಸಮಯದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾರೆ.