ಬೆಂಗಳೂರು: ಆಡುಗೋಡಿ, ಮೈಕೋ ಲೇಔಟ್ ಮತ್ತು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕ್ರಮೇಣ ನಿನ್ನೆ ಮೂರು ಅಪಘಾತ ಸಂಭವಿಸಿದ್ದು ಮೂರು ಜನ ಮೃತಪಟ್ಟಿರುತ್ತಾರೆ.
ದ್ವಿಚಕ್ರ ವಾಹನ ಮತ್ತು ಲಾರಿಗಳ ನಡುವೆ ಈ ಘಟನೆಗಳು ಸಂಭವಿಸಿರುತ್ತವೆ. ಸತ್ಯಣ್ಣ ಸಿಂಗ್ (53 ವರ್ಷ) ಐಸ್ ಕ್ರೀಮ್ ಮತ್ತು ಬೀಡಾ ವ್ಯಾಪಾರಿ, ಪ್ರಾಣೇಶ್ ಮೂರ್ತಿ (52 ವರ್ಷ) ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ವಿನೋದ್ ಕುಮಾರ್ (28 ವರ್ಷ) ಇವನು ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.