ಬೆಂಗಳೂರು: ಬೆಂಗಳೂರು ಗ್ರಾಮಾಂತರ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುದ್ರಪ್ಪ (93) ಎಂಬುವವರು ತಮ್ಮ ಪತ್ನಿ ಸಿದ್ದಮ್ಮರವರಿಗೆ ನಿನ್ನೆ ಸಂಜೆ ಎದೆಬೇನೆ ಕಾಣಿಸಿಕೊಂಡ ಪರಿಣಾಮ ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಮ್ಮ ಮಕ್ಕಳು ಕರೆದುಕೊಂಡು ಹೋಗಿದ್ದಾಗ,
ಮಾನಸಿಕವಾಗಿ ನೊಂದು ಕಿಟಕಿಗೆ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ದೊಡ್ಡ ಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಮದಗನ ಹೊಸಹಳ್ಳಿಯಲ್ಲಿ ಹನುಮಂತರಾಜು (55)ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.