ರಾಯಚೂರು: ಅಪರಿಚತ ವಾಹನ ಡಿಕ್ಕಿಯಿಂದಾಗಿ ಕುರಿಗಾಹಿ ಹಾಗೂ ಕುರಿಗಳು ಮೃತಪಟ್ಟಿರುವ ಘಟನೆ ರಾಯಚೂರು ಬಳಿಯ ಪವರ್ ಗ್ರೀಡ್ ಬಳಿ ನಡೆದಿದೆ.
ತೆಲಂಗಾಣದ ಕೆ.ಟಿ.ದೊಡ್ಡಿಯ ಶಿವು (35) ಮೃತ ದುರ್ದೈವಿ. 6 ಕುರಿಗಳು ಸಾವಿಗೀಡಾಗಿವೆ. ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿಗಾಹಿ ಶಿವು ಬೆಳಿಗ್ಗೆ ಕುರಿಗಳನ್ನ ಮೇಯಿಸಲು ಹೊರಟಿದ್ದರು.
ಈ ವೇಳೆ ಕುರಿಗಾಹಿ ಶಿವು ಹಾಗೂ ಕುರಿಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಿವು ಹಾಗೂ ಆರು ಕುರಿಗಳು ಮೃತಪಟ್ಟಿವೆ.