ಬೆಂಗಳೂರು: ರಾಜ್ಯದ್ಲಲಿ ಘೋಷಣೆಯಾಗಿರುವ ಎರಡು ಉಪಚುನಾವಣೆಗೆ ಅಭ್ಯರ್ಥಿಯಾಗಲು ಪೈಪೋಟಿ ನಡೆದಿದೆ.
ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್ಗಾಗಿ ದಾವಣಗೆರೆ ಟಿಕೆಟ್ ಬಯಸಿ ಮಾಜಿ ಸಚಿವ ಎಂಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆರಳಲಾಗಿತ್ತು. ಈಗ ಅದೆಲ್ಲವೂ ಬಗೆಹರಿದಿದೆ ಎಂದು ಸಂಸದ ಗೋವಿಂದಕಾರಜೋಳ ಬೆಳಗಾವಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ನಮ್ಮ ಪಕ್ಷದಲ್ಲಿ ಯಾವುದೇ ಟಿಕೆಟ್ ಗೊಂದಲವಿಲ್ಲ. ಹೈಕಮಾಂಡ್ ಎಲ್ಲವನ್ನು ಬಗೆಹಿರಿಸಿದೆ. ಇಂದು ಅಥವಾ ನಾಳೆ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು. ಈ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಟಿಕೆಟ್ ಹಂಚಿಕೆ ಸಂಬAಧ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಪಟ್ಟAತೆ ಇಂದು ಮುಖಂಡರ ಸಭೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆಯಲಿದೆ.
ಟಿಕೆಟ್ಗಾಗಿ ಮಾಜಿ ಸಚಿವ ಹಾಗೂ ಶಾಸಕ ಎಚ್.ವೈ.ಮೇಟಿ ಅವರ ಕುಟುಂಬದಲ್ಲೇ ಪೈಪೋಟಿ ನಡೆದಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದವ ವರಿಷ್ಠರು ಮೇಟಿ ಅವರ ಕುಟುಂಬದಲ್ಲಿ ಯಾರಾದರೊಬ್ಬರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಮೇಟಿ ಅವರ ಕುಟುಂಬದವರನ್ನು ಇಂದು ನಡೆಯುವ ಸಭೆಗೆ ಆಹ್ವಾನಿಸಲಾಗಿದೆ.
ಮೇಟಿ ಅವರ ಕುಟುಂಬದವರಾದ ಮಲ್ಲಿಕಾರ್ಜುನ ಹಾಗೂ ಉಮೇಶ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅವರ ಕಿರಿಯ ಪುತ್ರಿ ಮಹದೇವಿ ಕೂಡ ಆಕಾಂಕ್ಷಿಯಾಗಿದ್ದಾರೆ. ಒಟ್ಟಾರೆ ಟಿಕೆಟ್ಗಾಗಿ ಪೈಪೋಟಿ ಹೆಚ್ಚಾಗಿದ್ದು ಯಾರಿಗೆ ದೊರೆಯುತ್ತದೆ ಎಂಬುದು ಕುತುಹಲಕಾರಿಯಾಗಿದೆ.



