ಪೀಣ್ಯ ದಾಸರಹಳ್ಳಿ: ಅಂದ್ರಹಳ್ಳಿಯ ವಿದ್ಯಾಮಾನ್ಯ ವಿದ್ಯಾಕೇಂದ್ರ ಶಿಕ್ಷಣ ಸಂಸ್ಥೆ ತನ್ನ 21 ನೇ ಶಾಲಾ ವಾರ್ಷಿಕೋತ್ಸವದಲ್ಲಿ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 2 ದಿನಗಳಲ್ಲಿ 9 ಘಂಟೆಗಳ ಕಾಲ ಶ್ರೀ ರಾಮನ ಪುಣ್ಯ ಕತೆಯಾಧಾರಿತ “ಶ್ರೀ ರಾಮಕಥಾಮೃತ” ಎಂಬ ಧ್ವನಿ ಬೆಳಕಿನ ವಿಶೇಷ ಸಂಯೋಜನೆಯ ದೃಶ್ಯ ಕಾವ್ಯ ಪ್ರದರ್ಶನಕ್ಕೆ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಅಶ್ವಿನ್ ಡಿ. ಗೌಡ (ಐ. ಆರ್. ಎಸ್.) ಚಾಲನೆ ನೀಡಿದರು.
ಈ ವೇಳೆ ಮಾತಾನಾಡಿ ಕಳೆದ ಒಂದು ವಾರದಿಂದ ನಮ್ಮ ದೇಶ ರಾಮೋತ್ಸವದಿಂದ ತೇಲಾಡುತ್ತಿದೆ ಅದೇ ರಾಮೋತ್ಸವದ ಕಥಾಮೃತವನ್ನು ವಿದ್ಯಾಮಾನ್ಯ ವಿದ್ಯಾಕೇಂದ್ರದ ಮಕ್ಕಳು ನೆಡೆಸಿಕೊಟ್ಟಿರುವುದು ಇದಕ್ಕಿಂತ ಹಬ್ಬದ ಸುಗ್ಗಿ ಪೋಷಕರು ನಿರೀಕ್ಷಿಸಲು ಸಾಧ್ಯವಿಲ್ಲ.ಕಾಸ್ಟೂಮ್ ಡಿಸೈನ್ ನಿಂದ ನಾಟಕದ ಪರಿಕರಗಳು ಎಲ್ಲಾ ವಿದ್ಯಾರ್ಥಿಗಳೇ ಸಂಪೂರ್ಣ ತಯಾರು ಮಾಡಿರುವುದು ಮತ್ತೊಂದು ಸಂತೋಷ ತಂದಿದೆ.
ಮಕ್ಕಳು ಮೊದಲು ಕಲಿಕಾ ಹಂತದಲ್ಲಿ ತಂದೆ ತಾಯಿಯರ ನಡೆ ನುಡಿ ಅನುಕರಣೆ ಮಾಡಲು ಶುರು ಮಾಡುತ್ತವೆ. ಇತ್ತಿಚೀನ ದಿನಗಳಲ್ಲಿ ನಮಗೆ ಮೊಬೈಲ್ ನೋಡುವ ಗೀಳುಜಾಸ್ತಿಯಾಗಿದೆ.ನಾವು ಏನು ಮಾಡುತ್ತಿವೋ ಅದನ್ನು ನೋಡಿ ಮಕ್ಕಳು ಕಲಿಯುತ್ತವೆ. ಸಾಧ್ಯವಾದಷ್ಟು ಮನೆಯಲ್ಲಿ ನಾವು ಸಾಮಾಜಿಕ ಜಾಲತಾಣಗಳಿಂದ ಆಚೆ ಬಂದು ಪುಸ್ತಕಗಳು, ದಿನಪತ್ರಿಕೆ ಓದುವುದು ಅಭ್ಯಾಸ ಮಾಡಿಕೊಂಡರೆ ಮಕ್ಕಳು ಕೂಡ ಮೊಬೈಲ್ ನಿಂದ ಆಚೆ ಬಂದು ರಚನಾತ್ಮಕ ಸಾಮಥ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ನಿರ್ದೇಶಕ ಭರತ್ ಸೌಂದರ್ಯ ಮಾತಾನಾಡಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರತಿವರ್ಷ ನಮ್ಮ ದೇಶದ ಸಂಸ್ಕೃತಿ, ಇತಿಹಾಸ ಮಹತ್ವ ಸಾರುವ ವಿವಿಧ ರೀತಿಯ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತಿದ್ದೆವೆ. ಈ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೊಂಡ ಹಿನ್ನೆಲೆಯಲ್ಲಿ ಶ್ರೀ ರಾಮಕಥಾಮೃತ ಎಂಬ ದ್ವನಿ ಬೆಳಕಿನ ದೃಶ್ಯ ಕಾವ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳ ಸತತ ಪರಿಶ್ರಮದ ಅಭ್ಯಾಸ ಹಾಗೂ ರಂಗ ಪರಿಕರಗಳನ್ನು ತಯಾರಿಸಿರುವುದು ಇಲ್ಲಿನ ವಿಶೇಷವಾಗಿದ್ದು ಸುಮಾರು 50 ಕ್ಕೂ ಹೆಚ್ಚು ದಿನಗಳ ಪೂರ್ವ ತಯಾರಿಯೊಂದಿಗೆ ಮೂಡಿ ಬಂದ ಈ ವಿಶೇಷ ದೃಶ್ಯಕಾವ್ಯವನ್ನು ಸಾವಿರಾರು ಪ್ರೇಕ್ಷಕರು ವೀಕ್ಷಿಸಿ ಮೆಚ್ಚುಗೆಯನ್ನು ಪಡೆದರು.
ಮೊದಲನೆ ದಿನ ಶ್ರೀರಾಮ ಜನನದಿಂದ ಆರಂಭಗೊಂಡು ಶಬರಿಗೆ ರಾಮ ದರ್ಶನವಾಗುವ ವರೆಗಿನ ಕಥಾನಕಗಳು ಮೂಡಿಬಂದವು. ಇನ್ನು ಎರಡನೇದಿನ ಉತ್ತರಾರ್ಧದ ಸೀತಾ ಅನ್ವೇಷಣೆಯಿಂದ ತೊಡಗಿರಾವಣ ವಧೆಯ ವರೆಗಿನ ಕಥಾನಕಗಳು ಜರುಗಿದವು.
ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಅಶ್ವಿನ್ ಡಿ. ಗೌಡ (ಐ. ಆರ್. ಎಸ್.), ಕರ್ನಾಟಕ ಶಾಲಾ ಶಿಕ್ಷಣ ಮಂಡಳಿಯ ಉಪ ಆಯುಕ್ತರಾದ ಡಾ. ಆಕಾಶ್ ಎಸ್. (ಐ. ಎ. ಎಸ್.), ಯೂರೋಲಾಜಿಸ್ಟಕ ಡಾ. ಧನ್ ಶೇಖರ್, ಪರಂ ಎಕ್ಸ್ಪರಿಯನ್ಸ್ ಸೆಂಟರ್ ನಿರ್ದೇಶಕ ಜಿ ಆರ್ ಸಂತೋಷ್, ಸಂಸ್ಥೆಯ ಸಂಸ್ಥಾಪಕ ಸೌಂದರ್ಯ ರಮೇಶ್, ಅವರ ಶ್ರೀಮತಿ ದೇವಿಕಾ ರಮೇಶ್, ನಿರ್ದೇಶಕ ಸೌಂದರ್ಯ ಭರತ್ ಮತ್ತು ಪ್ರಾಂಶುಪಾಲರಾದ ಶಾರದ ವೇದಿಕೆಯಲ್ಲಿ ಉಪಸ್ಥಿತರಿದ್ದರು.