This is the title of the web page
This is the title of the web page

ಬೆಳ್ಳಿತೆರೆ ಮೇಲೆ ಬರಲಿದೆ ಶ್ರೀವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ ಹಯವದನ ನಿರ್ದೇಶನದಲ್ಲಿ ಮೂಡಿಬರಲಿದೆ ಸಿನಿಮಾ

`ಎಲ್ಲೋ ಜೋಗಪ್ಪ ನಿನ್ನರಮನೆ’ ನಿಮಾ ನಿರ್ದೇಶಕ ಹಯವದನ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಸಿನಿಮಾವನ್ನು ಹಯವದನ ನಿರ್ದೇಶನ ಮಾಡುತ್ತಿದ್ದಾರೆ. ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಿದೆ. ವಾದಿರಾಜ ಗುರುಗಳ ಜಯಂತಿಯಂದೇ ಶ್ರೀ ವಾದಿರಾಜ ಸ್ವಾಮಿಗಳ ಮಠ ಹೂವಿನಕೆರೆ ಕುಂದಾಪುರದಲ್ಲಿ ಸಿನಿಮಾ ಘೋಷಣೆ ಮಾಡಿದ್ದು ವಿಶೇಷವಾಗಿತ್ತು.

ಈ ಬಗ್ಗೆ ನಿರ್ದೇಶಕ ಹಯವದನ ಮಾಹಿತಿ ಹಂಚಿಕೊಂಡಿದ್ದು, ಸ್ಕ್ರಿಪ್ಟ್ ಹಾಗೂ ರಿಸರ್ಚ್ ವರ್ಕ್ ನಡೆಯುತ್ತಿದೆ. ಸಿನಿಮಾದ ತಾರಾಗಣ, ತಾಂತ್ರಿಕ ಬಳಗ ಇದ್ಯಾವುದು ಇನ್ನೂ ಫೈನಲ್ ಆಗಿಲ್ಲ. 15ನೇ ಶತಮಾನದಲ್ಲಿ ನಡೆದ ಕಥೆ ಇದು. ಶ್ರೀ ವಾದಿರಾಜ ಸ್ವಾಮಿಗಳು 120 ವರ್ಷಗಳು ಬದುಕಿದ್ದರು. ಆ ಕಾಲಘಟ್ಟವನ್ನು ಸೃಷ್ಟಿ ಮಾಡೋದೇ ಒಂದು ಚಾಲೆಂಜ್. ಸಿಜಿ, ಗ್ರಾಫಿಕ್ಸ್ ಹೆಚ್ಚಾಗಿರುತ್ತೆ, ಭಕ್ತಿ, ಸಮಾಜ ಸೇವೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಸಮಾಜ ಸುಧಾರಣೆ ಮಾಡಿದ್ದಾರೆ, 15ನೇ ಶತಮಾನದಲ್ಲೇ ಕನ್ನಡದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ, ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ. ಭಕ್ತಿ ಮತ್ತು ಗೌರವದಿಂದ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು ಮಾತನಾಡಿ ವಾದಿರಾಜ ಗುರುಗಳು15,16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ, ಈ ಜಗತ್ತಿಗೆ ಬಹುಮುಖ ಸಂದೇಶ ನೀಡಿದವರು. ವಿಕ್ರಮ್ ಹತ್ವಾರ್, ನಿರ್ದೇಶಕ ಹಯವದನ ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದು, ಐದು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಟೈಟಲ್, ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪೆÇ್ರಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.