ಗೌರಿಬಿದನೂರು: ನಗರದ ಹೊರವಲಯದ ನಾಗಪ್ಪ ಬ್ಲಾಕ್ ಬೈಪಾಸ್ ರಸ್ತೆ ಬಳಿ ಆಟೋ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ನಡೆದಿದೆ.
ಇಂದು ಬೆಳಿಗ್ಗೆ ಆಟೋ ವಿದುರಾಶ್ವತ್ಥ ಕಡೆಯಿಂದ ಬರುತ್ತಿತ್ತು ಬೈಪಾಸ್ ರಸ್ತೆಯಿಂದ ವೇಗವಾಗಿ ಬಂದ ಕಂಟೇನೆರ್ಗೆ ಡಿಕ್ಕಿಯಾಗಿದೆ, ಅಪಘಾತ ರಭಸಕ್ಕೆ ಆಟೋ ನಜ್ಜು ಗುಜ್ಜಾಗಿ ಸುಮಾರು 13 ವಿಧ್ಯಾರ್ಥಿಗಳು ಗಾಯಗೊಂಡು ಅದರಲ್ಲಿ ನಾಲ್ಕು ವಿದ್ಯಾರ್ಥಿಗಳ ಗಂಭೀರ ಪರಿಸ್ಥಿತಿ ಆಗಿದೆ, ಗಾಯಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾಸಿದ್ದಾರೆ.
ಆಟೋ ಚಾಲಕ ಶ್ರೀನಿವಾಸ್, ಲೋಕೇಶ್ ವೆನ್ನಲಾ, ಸಹನಾ, ತ್ರಿವೇಣಿ, ಪವಿತ್ರ, ರೋಷಿಣಿ ಸೇರಿದಂತೆ 13 ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಟೋದಲ್ಲಿ ಪ್ರಯಾಣ ಮಾಡಿದ್ದಾರೆ, ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳ ಪೈಕಿ ವನಜಾ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ, ಕಂಟೇನರ್ ವಾಹನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.