ಕನಕಪುರ: ನಗರದ ರೂರಲ್ ಕಾಲೇಜಿನಲ್ಲಿ ನಡೆದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಾಗವಹಿಸಿ ಪರ-ವಿರೋಧ ಚರ್ಚೆ ಮಂಡಿಸಿದರು. ನಗರದ ರೂರಲ್ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಮಾಜಿಕ ಅಸ್ಥಿರತೆಗೆ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಕಾರಣವೇ? ಎಂಬ ವಿಷಯ ಕುರಿತು ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಗೆ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಹಲವಾರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನಾಲ್ಕು ನಿಮಿಷಗಳ ಕಾಲದ ಗಡುವಿನಲ್ಲಿ ಪರ ವಿರೋಧ ವಾದ ಮಂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಕೆ. ಎಸ್. ಬಸವರಾಜ್ ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಕನ್ನಡ ಮಾಧ್ಯಮ ಎಂಬ ಕೀಳರಿಮೆ ದೂರ ಮಾಡಿ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ಎದುರಿಸುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್ ಇ ಎಸ್ ಅಧ್ಯಕ್ಷ ಹೆಚ್, ಕೆ ಶ್ರೀಕಂಠು ಮಾತನಾಡಿ ವಿದ್ಯಾರ್ಥಿಗಳು ಕೌಶಲ್ಯ ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಒತ್ತು ನೀಡಲು ಈ ರೀತಿಯ ಕಾರ್ಯಕ್ರಮಗಳ ಪ್ರಸ್ತುತತೆಯ ಅವಶ್ಯಕತೆ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿಕೊಟ್ಟರು.
ಚರ್ಚಾ ಸ್ಪರ್ಧೆಯಲ್ಲಿ ಪರ-ವಿರೋದದ ಬಗ್ಗೆ ಚರ್ಚೆ ನಡೆಸಿ ಬೆಂಗಳೂರಿನ ಬಿ.ಎಂ.ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿ ಜೆ.ಕೆ.ಗಗನ ಪ್ರಥಮ ಸ್ಥಾನ ಪಡೆದು ಕೊಂಡ ರು, ಬೆಂಗಳೂರಿನ ಎ.ಪಿ.ಎಸ್ ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ್ ದ್ವಿತೀಯ,ವಿ.ವಿ ಪುರಂ ಕಾನೂನು ಕಾಲೆಜೀನ ರೂಪಶ್ರೀ ತೃತೀಯ ಸ್ಥಾನ,
ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿ ಪೃಥ್ವಿ ಭಟ್ ನಾಲ್ಕನೇ ಸ್ಥಾನ, ಕನಕಪುರ ರೂರಲ್ ಕಾಲೇಜಿನ ಅಂಜಲಿ ಐದನೇ ಸ್ಥಾನ ಪಡೆದು ಕೊಂಡರು. ಬೆಂಗಳೂರು ವಿ.ವಿ ಪುರಂ ಕಾನೂನು ಕಾಲೇಜಿಗೆ ಪರ್ಯಾಯ ಪಾರಿತೋಷಕ,ಕನಕಪುರ ರೂರಲ್ ಕಾಲೇಜಿಗೆ ಪರ್ಯಾಯ ಕರಂಡ ಗಳಿಸಿದವು,ಸಂಸ್ಥೆಯ ಅಧ್ಯಕ್ಷ ಶ್ರೀಕಂಠು ಅವರು ಚರ್ಚಾ ಸ್ಫರ್ಧೆಯಲ್ಲಿ ಭಾಗ ವಹಿಸಿದ್ದ 10 ಅಭ್ಯರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಸಮಾಧಾನಕರ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ ಟಿ ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ದೇವರಾಜು, ಹಾಗೂ ಆಡಳಿತ ಮಂಡಳಿ ಎಲ್ಲಾ ಸದಸ್ಯರು ಮತ್ತು ತೀರ್ಪುಗಾರರಾಗಿ ಡಾ. ರವೀಂದ್ರ, ಸತ್ಯರಾಜು, ಹಾಗೂ ಹನುಮಂತೆ ಗೌಡ, ಚರ್ಚಾ ಸಮಿತಿಯ ಸಂಚಾಲಕರಾದ ರಾಗಿಣಿ, ಸದಸ್ಯ ರಾದ ಪ್ರೋ ದೇವರಾಜು ಸಿ ವಿ, ಪ್ರೋ ಮೋಹನ್ ಕುಮಾರ್, ಪ್ರೋ ಸುಷ್ಮಾ, ಪ್ರೋ ಕುಮಾರಸ್ವಾಮಿ, ಪ್ರೋ ಸಾಗರ್, ಸುಧಾಕರ್, ಪ್ರೋ ಪ್ರಶಾಂತ್ ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.