ದಾಬಸ್ಪೇಟೆ: ಮಠದ ಹಾಸ್ಟೆಲ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಅನುಮಾನಸ್ಪಾದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ವನಕಲ್ಲು ಮಲ್ಲೇಶ್ವರ ಮಠದಲ್ಲಿ ವಾಸವಿದ್ದ ಅಜಯ್ (12)ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಈತ ಮಠದಲ್ಲೇ ಇದ್ದ ಸರಕಾರಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಇವನು ಮೂಲತಃ ತುಮಕೂರು ಜಿಲ್ಲೆಯಕಾಳೇನಹಳ್ಳಿ ಗ್ರಾಮದವನು ಎನ್ನಲಾಗಿದೆ.
ಘಟನಾ ವಿವರ: ಮೃತ ಅಜಯ್ ಕಳೆದ ಆರು ವರ್ಷಗಳಿಂದ ವನಕಲ್ಲು ಮಠದ ಹಾಸ್ಟೇಲ್ನಲ್ಲಿದ್ದುಕೊಂಡು ಅಲ್ಲೇ ಓದುತ್ತಿದ್ದನು, ಜೊತೆಗೆ ಈತನ ಅಣ್ಣನ ಅಲ್ಲೇ 9ನೇ ತರಗತಿ ಓದಿಕೊಂಡು ಮಠದಲ್ಲೇ ಇಬ್ಬರೂ ಅಭ್ಯಾಸ ಮಾಡುತ್ತಿದ್ದರು. ನ.2ರಂದು ಎಂದಿನಂತೆ ಮಠದಲ್ಲಿ ಅಣ್ಣತಮ್ಮ ಜೊತೆಗಿದ್ದು ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ನನಗೆ ನಿದ್ದೆ ಬರುತ್ತಿದೆ ಮಲಗುತ್ತೇನೆ ಎಂದು ಅಣ್ಣನ ಬಳಿಹೇಳಿ ರೂಮ್ಗೆ ಬಂದಿದ್ದಾನೆ. ಆದರೆ ಆತ ರೂಮ್ಗೆ ಹೋಗದೆ ಮಠದ ಸಮೀಪದಲ್ಲೇ ಇರುವ ಮರಕ್ಕೆ ತನ್ನ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಠದ ಜಮೀನಿನ ಅಕ್ಕಪಕ್ಕ ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೋಷಕರ ಆರೋಪ: ಇನ್ನೂ ವಿಷಯತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮೃತ ಪೋಷಕರ ಹಾಗೂ ತಾಯಿ ನಾಗರತ್ನಮ್ಮ
ಮಾತನಾಡಿ, ನಮ್ಮ ಹುಡುಗ ಚಿಕ್ಕ ವಯಸ್ಸಿನವನಾಗಿದ್ದು, ಆತನಿಗೆ ಮರ ಹತ್ತಲು ಬರುತ್ತಿರಲಿಲ್ಲ.ಯಾರೋ ಆತನನ್ನು ಸಾಯಿಸಿ ಇಲ್ಲಿ ತಂದುನೇಣು ಹಾಕಿದ್ದಾರೆ, ನನ್ನ ಮಗ ಆತ್ಮಹತ್ಯೆಮಾಡಿಕೊಂಡಿರುವ ಬಗ್ಗೆ ಸ್ವಾಮೀಜಿಯವರಾಗಲಿ, ಮಠದ ಸಿಬ್ಬಂದಿಯವರಾಗಲಿ ಕರೆ ಮಾಡಿ ತಿಳಿಸಲಿಲ್ಲ. ನನ್ನ ಮಗನ ಕುತ್ತಿಗೆಯ ಭಾಗದಲ್ಲಿ ಉಗುರಿನಿಂದ ಚರ್ಮ ಪರಚಿರುವ ಗುರುತು ಇದೆ, ಕುತ್ತಿಗೆ ಊದುಕೊಂಡಿದ್ದು ಕತ್ತು ಹಿಸುಕಿ ಸಾಯಿಸಿ ಆತ ಅತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು, ಅಲ್ಲದೇ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ನನಗೂ ಅಘಾತವಾಗಿದೆ: ಇನ್ನೂ ಈ ಘಟನೆಗೆ ಸಂಬಂಧಸಿದಂತೆ ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಪ್ರತಿಕ್ರಿಯಿಸಿ ಮೃತಪಟ್ಟಿರುವ ಹುಡುಗ ನಮ್ಮ ಮಠದಲ್ಲೇ ಬಹಳ ಚಟುವಟಿಕೆಯಿಂದ ಇರುತ್ತಿದ್ದನು. ಈತ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ಆಘಾತವನ್ನುಂಟು ಮಾಡಿದೆ. ಘಟನೆ ನಡೆದ ಸಂದರ್ಭದಲ್ಲಿ ನಾನು ಮಠದಲ್ಲಿ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವುದು ಯಾವ ವಿಷಯಕ್ಕೆ ಎಂದು ಗೊತ್ತಿಲ್ಲ. ಪೊಲೀಸರಿಂದ ತನಿಖೆಯಿಂದ ತಿಳಿಯಬೇಕಿದೆ, ಮರಣೋತ್ತರ ಪರೀಕ್ಷೆ ವರದಿ ನಂತರ ವಿಚಾರ ತಿಳಿಯಲಿದೆ ಎಂದರು.
ಮಾಹಿತಿಯೇ ನೀಡಿರಲಿಲ್ಲ : ಈ ಹಿಂದೆ ನಮ್ಮ ಮಕ್ಕಳು ಮೂರು ದಿನ ಮಠ ಬಿಟ್ಟು ಹೊರಹೋಗಿದ್ದರು. ಆಗ ಸ್ವಾಮೀಜಿಯಾಗಲಿ, ವಾರ್ಡನ್ ಆಗಲಿ ಮಾಹಿತಿಯೇ ನೀಡಿರಲಿಲ್ಲ. ನನ್ನ ದೊಡ್ಡ ಮಗ ಕರೆಮಾಡಿ ತಿಳಿಸಿದ್ದನು. ಮಕ್ಕಳು ಶಾಲೆಗೆ ಹೋಗದಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಮೃತನ ತಾಯಿ ಆರೋಪಿಸಿದರು.
ಘಟನೆಗೆ ಸಂಬಂಸಿಂತೆ ಘಟನಾ ಸ್ಥಳಕ್ಕೆದಾಬಸ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.