ಬೆಂಗಳೂರು: ನೋವೋ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ (NNEF) ಮತ್ತು ಭಾರತದ ಮೊಟ್ಟ ಮೊದಲ ಪಟ್ಟಿ ಮಾಡಲಾದ REIT ಹಾಗೂ ಪ್ರದೇಶಾವಾರಿನಲ್ಲಿ, ಏಶ್ಯಾದ ಅತಿದೊಡ್ಡ ಕಚೇರಿ REIT ಆದ ಎಂಬೆಸಿ REIT , ಉತ್ತರ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಎಂಬೆಸಿ ಮಾನ್ಯತಾ ಬಿಜಿನೆಸ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿರುವ 1,00,000ಕ್ಕಿಂತ ಹೆಚ್ಚಿನ ಉದ್ಯೋಗಿಗಳಿಗಾಗಿ ಉದ್ಯೋಗಸ್ಥಳದಲ್ಲಿ ಆರೋಗ್ಯ(Health at Workplace) ಉದ್ದೇಶವನ್ನು ಮುನ್ನಡೆಸಲು ಒಂದು ಕೌತುಕಮಯವಾದ ಸಹಭಾಗಿತ್ವ ಏರ್ಪಡಿಸಿಕೊಂಡಿವೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಸಚಿವ ದಿನೇಶ್ ರಾವ್ ಹಾಗೂ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ (SIKT) ರಾಜೀವ್ ಗೌಡ ಅವರ ಗೌರವಾನ್ವಿತ ಹಾಜರಿಯಲ್ಲಿ ಇಂದು ಎರಡೂ ಸಂಸ್ಥೆಗಳು ಒಂದು ಒಪ್ಪಂದಕ್ಕೆ (MoU) ಸಹಿ ಹಾಕಿದವು. ಇದು, ಪಾರ್ಕ್ನಿಂದ ಕಾರ್ಯಾಚರಣೆ ಮಾಡುವಂತಹ ಸುಮಾರು 50 ಮುಂಚೂಣಿ ಕಾರ್ಪೋರೇಟ್ಗಳ ಉದ್ಯೋಗಿಗಳನ್ನು ಗುರಿಯಾಗಿರಿಸಿಕೊಂಡು, ಆರೋಗ್ಯಶುಶ್ರೂಷಾ ಯೋಜನೆಗಳನ್ನು ಮುನ್ನಡೆಸುವಲ್ಲಿ ಮಹತ್ತರವಾದ ಮೈಲಿಗಲ್ಲಾಗಿದೆ.
ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯ ಸನ್ಮಾನ್ಯ ಸಚಿವ ದಿನೇಶ್ ಗುಂಡುರಾವ್, “ಕರ್ನಾಟಕದಲ್ಲಿ ಆರೋಗ್ಯ ವ್ಯವಸ್ಥೆಗಳು ಹಾಗೂ ಸೇವೆಗಳು, ತನ್ನ ಎಲ್ಲಾ ನಾಗರಿಕರ ಒಟ್ಟಾರೆ ಕ್ಷೇಮಾಭಿವೃದ್ಧಿಯ ಅಗತ್ಯಗಳನ್ನು ಪೂರೈಸಿ ಪ್ರೋತ್ಸಾಹಿಸುವುದಕ್ಕೆ ರೂಪಿತವಾಗಿವೆ.
ತಡೆಯಾತ್ಮಕ ಹಾಗೂ ಸಮಗ್ರವಾದ ಆರೋಗ್ಯಶುಶ್ರೂಷೆಯ ಸುತ್ತ ಇರುವ ಯೋಜನೆಗಳು ಈ ಕ್ಷಣದ ಅಗತ್ಯವಾಗಿದ್ದು, ನೋವೋ ನಾರ್ಡಿಸ್ಕ್ ಎಜುಕೇಡನ್ ಫೌಂಡೇಶನ್ ಹಾಗೂ ಎಂಬೆಸಿ REIT ಆರಂಭಿಸಿರುವ ಈ ಕಾರ್ಯಕ್ರಮವು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಒಂದು ಹೆಜ್ಜೆಯಾಗಿದೆ.
ಕೇಂದ್ರ ಹಾಗೂ ರಾಜ್ಯ-ನೆರವಿನ ಹೂಡಿಕೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಆರೋಗ್ಯಶುಶ್ರೂಷಾ ಒದಗಣೆಯಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದರೂ, ಖಾಸಗಿ ಸಂಸ್ಥೆಗಳೊಂದಿಗಿನ ಸಹಯೋಗಾತ್ಮಕ ಉಪಕ್ರಮಗಳು, ನಮ್ಮ ಪ್ರಸ್ತುತದ ಕಾರ್ಯಕ್ರಮಗಳನ್ನು ಬಲಪಡಿಸಿ ವರ್ಧಿಸುವುದಕ್ಕಾಗಿ ಒಂದು ಸಂಯೋಜಿತ ಆರೋಗ್ಯಶುಶ್ರೂಷಾ ಪರಿಸರವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಅತಿಮುಖ್ಯವಾಗಿದೆ ಎಂದರು.
ಓಓಇ ಈನ ಮ್ಯಾನೇಜಿಂಗ್ ಟ್ರಸ್ಟೀ ವಿಕ್ರಾಂತ್ ಶ್ರೋತ್ರಿಯ, ಅತಿತೂಕ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಿ ಒಂದು ಆರೋಗ್ಯಕರವಾದ ಸಮುದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಇದು ಒಂದು ಬಲಿಷ್ಟ ಅಡಿಪಾಯ ಹಾಕಲಿದೆ ಎಂದು ನಾವು ನಂಬಿದ್ದೇವೆ. ಎಂದು ಒತ್ತಿ ಹೇಳಿದರು.
ಎಂಬೆಸಿ REITದ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಅರವಿಂದ್ ಮಯ್ಯ, ಸಮಗ್ರವಾದ ಆರೋಗ್ಯ ಹಾಗೂ ಸ್ವಾಸ್ಥ್ಯವನ್ನು ಪ್ರೋತ್ಸಾಹಿಸುವ ಅತ್ಯುತ್ತಮವಾಗಿರುವ ಈ ಉಪಕ್ರಮಕ್ಕಾಗಿ ಓಓಇಈದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಸ್ವಾಸ್ಥ್ಯ-ಕೇಂದ್ರಿತ ಉದ್ಯೋಗಸ್ಥಳಗಳನ್ನು ಸೃಷ್ಟಿಸುವುದು ಎಂಬೆಸಿ REITದ ಮೂಲ ಸಿದ್ಧಾಂತವಾಗಿದ್ದು, ಇಂತಹ ಅತ್ಯದ್ಭುತವಾದ ಕಾರ್ಯಕ್ರಮಕ್ಕೆ ಸಹಯೋಗ ಏರ್ಪಡಿಸಿಕೊಳ್ಳಲು ನೋವೋ ನಾರ್ಡಿಸ್ಕ್ ಇಂಡಿಯಾಕ್ಕಿಂತ ಅತ್ಯುತ್ತಮ ಭಾಗೀದಾರ ಮತ್ತೊಂದಿಲ್ಲ ಎಂದರು.