ಬರ್ಮಿಂಗ್‍ಹ್ಯಾಮ್: ಮಂಗಳವಾರ ಮೊದಲ್ಗೊಂಡ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್ ಗೆಲುವಿನ ಆರಂಭ ಪಡೆದಿದ್ದಾರೆ. ವಿಶ್ವದ ನಂ. 9ನೇ ಆಟಗಾರನಾಗಿರುವ ಪ್ರಣಯ್ ತೀವ್ರ ಪ್ರತಿರೋಧ ಒಡ್ಡಿದ ತೈವಾನ್‍ನ ಝು ವೀ ವಾಂಗ್ ಅವರನ್ನು 21-19, 22-20 ಅಂತರದಿಂದ ಮಣಿಸಿದರು.
49 ನಿಮಿಷಗಳ ಕಾಲ ಇವರ ಆಟ ಸಾಗಿತು. ಇದರೊಂದಿಗೆ ವಾಂಗ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪ್ರಣಯ್ 5-3ರ ಮುನ್ನಡೆ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಪ್ರಣಯ್ ಇಂಡೋನೇಷ್ಯಾದ ಆಯಂಟನಿ ಸಿನಿಸುಕ ಗಿಂಟಿಂಗ್ ಅಥವಾ ಥಾಯ್ಲೆಂಡ್‍ನ ಕಾಂತಪೋನ್ ವಾಂಗ್‍ಶರೋನ್ ಅವರನ್ನು ಎದುರಿಸುವರು. ಲಕ್ಷ್ಯ ಸೇನ್ ಚೈನೀಸ್ ತೈಪೆಯ ಚೌ ಟೀನ್ ಚೆನ್ ಅವರನ್ನು 21-18, 21-19 ಅಂತರದಿಂದ ಹಿಮ್ಮೆಟ್ಟಿಸಿದರು.
Leave a Review