ಚನ್ನರಾಯಪಟ್ಟಣ: ನಮ್ಮ ನಾಡಿನಲ್ಲಿ ಹೆಣ್ಣಿಗೆ ದೇವರ ಸ್ಥಾನ ಕೊಟ್ಟಿದ್ದಾರೆ ಭೂಮಿ ನೀರು ಜನುಮ ಕೊಡುವ ಹೆಣ್ಣಿಗೆ ದೇವರ ಸ್ಥಾನ ಕೊಟ್ಟಿದ್ದಾರೆ ಎಂದು ಡಾಕ್ಟರ್ ಓಮೇಶ್ ಹೇಳಿದರು.
ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನ ಅಂಗವಾಗಿ ಜ್ಯೋತಿ ಬೆಳಗಿಸಿ ಮಾತನಾಡಿ ಹೆಣ್ಣು ಮಗು ಎಂಬುದು ತಾತ್ಸಾರ ಮನೋಭಾವ ಬೇಡ ಕೆಲವರ ಮನಸ್ಸಿನಲ್ಲಿ ಹೆಣ್ಣು ಎಂದು ತಾತ್ಸಾರ ಮಾಡುತ್ತಾರೆ ಹುಟ್ಟುವ ಮೊದಲೇ ಅದನ್ನು ಚೂಟಾಕುವ ಆಲೋಚನೆ ಮಾಡುತ್ತಾರೆ ಇದು ಮಹಾ ಪಾಪದ ಕೆಲಸ ಇಂದಿನ ಕಾಲದಿಂದಲೂ ಹೆಣ್ಣಿಗೆ ಒಳ್ಳೆಯ ಸ್ಥಾನಮಾನ ನೀಡುತ್ತಾರೆ.
ಈಗಲೂ ಸಹ ಒಂದು ಸಂಸಾರದ ಕಣ್ಣು ಎಂದರೆ ಹೆಣ್ಣು ಇತ್ತೀಚಿನ ತಂತ್ರಜ್ಞಾನ ಯುದ್ಧದಲ್ಲಿ ಹೆಣ್ಣುಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಕಡಿಮೆ ಇಲ್ಲದಂತೆ ಸರಿ ಸಮಾನವಾಗಿ ಸಾಧಿಸಿ ತೋರಿಸಿದ್ದಾರೆ ಹೆಣ್ಣು ಮಗುವಿಗೆ ಪೋಷಕರು ವಿದ್ಯಾಭ್ಯಾಸ ಕೊಡಿಸಿದರೆ ಅದೇ ದೊಡ್ಡ ಆಸ್ತಿ ಎಂದರುಈ ಸಂದರ್ಭದಲ್ಲಿ ಡಾಕ್ಟರ್ ವಿನಾಕುಮಾರಿ ಪವಿತ್ರ ರುಕ್ಮಿಣಿ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು ಹಾಜರಿದ್ದರು.