ಮೈಸೂರು: ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಶ್ರೀಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ, ಕಾಡುಮಲ್ಲೇಶ್ವರ ಗೆಳೆಯರ ಬಳಗದ ವತಿಯಿಂದ ವಿಶೇಷ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಹಯವದನ ಸ್ಕೂಲ್ ಆಫ್ ಮ್ಯೂಸಿಕ್ ವತಿಯಿಂದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು, ಗಾಯನದಲ್ಲಿ ಇಂದುಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ|| ಜಿ.ವೈ. ಪದ್ಮ ನಾಗರಾಜ್, ನಾಗರತ್ನ, ಸೌಮ್ಯ ಅನಿಲ್, ಸ್ವಪ್ನ ಅಡಿಗ, ಲಕ್ಷ್ಮೀ ಸಾಹಿತಿ, ಸಮೀಕ್ಷಾ ವಾರುಣಿ, ಶ್ರೀಧನ್ಯ, ಸೌಮ್ಯ ಚೇಂಜಿ, ಶಿಲ್ಪ ಹಿರೇಮಟ್, ಶ್ರೀಲೇಖಾ,ಪಕ್ಕವಾದ್ಯದಲ್ಲಿ ಆಶ್ರಿತ್ ಕೃಷ್ಣ ರವರಿಂದ ಪಿಟೀಲು ವಾದನ, ಮುರಳಿಧರ್ ರವರಿಂದ ಮೃದಂಗ ವಾದನದೊಂದಿಗೆ ಅಮೋಘವಾಗಿ ಸಂಗೀತ ಕಾರ್ಯಕ್ರಮ ಜರುಗಿತು, ಕಾರ್ಯಕ್ರಮದ ಆಯೋಜಕರಾದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಸೇರಿದಂತೆ ಅನೇಕ ಗಣ್ಯರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು.
ಸಾಂಸ್ಕೃತಿಕ



