ಚಿಕ್ಕಬಳ್ಳಾಫುರ: ಮೋಜು ಮಸ್ತಿಗೆ ಅಂತ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಬಂದಿದ್ದ ಯುವಕ ನೀರಿನಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸಸಾಗರ ಕೆರೆಯಲ್ಲಿ ನಡೆದಿದೆ..
ಮೃತ ಯುವಕನನ್ನ ಬೆಂಗಳೂರಿನ ಬಾಬುಸಾಪಾಳ್ಯಾ ನಿವಾಸಿ 23 ವರ್ಷದ ಅಭಿ ಎಂದು ತಿಳಿದುಬಂದಿದ್ದು,11 ಜನ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಅಭಿ ಶ್ರೀನಿವಾಸ ಸಾಗರ ಕೆರೆಯಲ್ಲಿ ಈಜಲು ನೀರಿಗಿಳಿದಿದ್ದಾನೆ ಆದರೆ ಸರಿಯಾಗಿ ಈಜು ಬಾರದ ಕಾರಣ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.. ತಂದೆ ತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ ನೀರುಪಾಲಾಗಿದ್ದು..
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶವ ಶೋಧಕಾರ್ಯ ನಡೆಸಿದ್ದು ಇನ್ನೂ ಮೃತದೇಹ ಪತ್ತೆಯಾಗಿಲ್ಲ.. ಕತ್ತಲೆಯಾದ್ರಿಂದ ನಾಳೆ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ನಡೆಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.